ಪ್ರಯಾಣಿಕರ ಬ್ಯಾಗ್​ನಲ್ಲಿದ್ದ ಬೆಲೆಬಾಳುವ ವಸ್ತು ಎಗರಿಸುತ್ತಿದ್ದ ಏರ್​ಪೋರ್ಟ್ ಸಿಬ್ಬಂದಿ: ಶಾಕಿಂಗ್ ವಿಡಿಯೋ ವೈರಲ್​

ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಎಸ್​ಎ ಸಿಬ್ಬಂದಿಯೇ ಪ್ರಯಾಣಿಕರ ಬ್ಯಾಗ್​ನಲ್ಲಿದ್ದ ಐಟೆಂಗಳನ್ನು ಕದಿಯುತ್ತಿರುವ ಆತಂಕಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಫ್ಲೋರಿಡಾ ಆಟರ್ನಿ ಅಧಿಕಾರಿಗಳು ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಜುಲೈ 29ನೇ ತಾರೀಖಿನ 20 ನಿಮಿಷಗಳ ವಿಡಿಯೋದಲ್ಲಿ ಟಿಎಸ್​ಎ ಅಧಿಕಾರಿಗಳಾದ ವಿಲಿಯಮ್ಸ್​ ಹಾಗೂ ಗೋಂಝಾಲ್ಸ್​ ಎಂಬವರು ಪ್ರಯಾಣಿಕರ ಬ್ಯಾಗ್​ನಿಂದ ಪರ್ಸ್​ ತೆಗೆದುಕೊಂಡು ಬಳಿಕ ಬ್ಯಾಗ್​ನ್ನು ಸಿಟಿ ಸ್ಕ್ಯಾನರ್​ಗೆ ತಳ್ಳಿದ್ದಾರೆ. ಮತ್ತೊಂದು ಕ್ಲಿಪ್​ನಲ್ಲಿ ಇಬ್ಬರು ಏಜೆಂಟ್​ಗಳು ಸೆಕ್ಯೂರಿಟಿ ಟ್ರೇ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲಿದ್ದ ವಸ್ತುಗಳನ್ನು ಜೇಬಿಗೆ ಎಗರಿಸಿದ್ದಾರೆ.

ಮೂವರು ಆರೋಪಿಗಳಾದ ಲ್ಯಾಬಾರಿಯಸ್​ ವಿಲಿಯಮ್ಸ್​, ಜೋಸ್​ ಗಂಜಾಲೇಸ್​ ಹಾಗೂ ಎಲಜಬೆತ್​ ಫಸ್ಟರ್​ ರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಫಸ್ಟರ್​ರನ್ನು ಪೊಲೀಸರು ಬಳಿಕ ರಿಲೀಸ್​ ಮಾಡಿದ್ದಾರೆ ಎನ್ನಲಾಗಿದೆ.

ಮಿಯಾಮಿ ಏರ್​ಪೋರ್ಟ್​ನಲ್ಲಿ ನಡೆದ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಪ್ರಯಾಣಿಕರೊಬ್ಬರು, ಸಿಸಿ ಟಿವಿ ಇದೆ ಎಂದು ಗೊತ್ತಿದ್ದರೂ ಸಹ ಈ ರೀತಿ ಕೃತ್ಯ ಎಸಗಲು ಅವರಿಗೆ ಧೈರ್ಯ ಎಷ್ಟಿರಬೇಡ ಎಂದು ಪ್ರಶ್ನೆ ಮಾಡಿದ್ದಾರೆ.

https://twitter.com/i/status/1702102526731202655

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read