HomeBeautyಮೊಡವೆ ಸಮಸ್ಯೆ ನಿವಾರಿಸಲು ಈ ಫೇಸ್ ವಾಶ್ ಬಳಸಿ ನೋಡಿ

ಮೊಡವೆ ಸಮಸ್ಯೆ ನಿವಾರಿಸಲು ಈ ಫೇಸ್ ವಾಶ್ ಬಳಸಿ ನೋಡಿ

ಹದಿಹರೆಯದಲ್ಲಿ ಹಾರ್ಮೋನ್ ಸಮಸ್ಯೆ, ವಾತಾವರಣದ ಧೂಳು, ಕೊಳೆ ಮುಂತಾದವುಗಳಿಂದ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಹಾಗಾಗಿ ಈ ಮೊಡವೆ ಸಮಸ್ಯೆ ನಿವಾರಿಸಿ, ಮುಖದ ಚರ್ಮವನ್ನು ಸ್ವಚ್ಛಗೊಳಿಸಲು ಈ ಫೇಸ್ ವಾಶ್ ಬಳಸಿ.

ಸ್ವಚ್ಛಗೊಳಿಸಿದ 20 ಬೇವಿನ ಎಲೆಗಳಗೆ 20 ತುಳಸಿ ಎಲೆಗಳನ್ನು ಸೇರಿಸಿ ನೀರು ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಸೋಸಿ. ಬಳಿಕ ಸೋಪ್ ಬೇಸ್ ನ್ನು ಡಬಲ್ ಬಾಯ್ಲರ್ ನಲ್ಲಿ ಕರಗಿಸಿಕೊಳ್ಳಿ. ಹಾಗೇ ತುಳಸಿ ಮತ್ತು ಬೇವಿನ ರಸಕ್ಕೆ 1 ಚಮಚ ಅಲೋವೆರಾ ಜ್ಯೂಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಿ.

 ಬಳಿಕ ಸೋಪ್ ಬೇಸ್ ತಣ್ಣಗಾದ ನಂತರ ತುಳಸಿ ಬೇವಿನ ಜ್ಯೂಸ್ ಅನ್ನು ಸೇರಿಸಿ ಗಾಳಿಯಾಡದ ಡಬ್ಬದಲ್ಲಿ ಸ್ಟೋರ್ ಮಾಡಿ ಇಡಿ. ಇದರಿಂದ ಪ್ರತಿಬಾರಿ ಮುಖವನ್ನು ತೊಳೆಯಿರಿ.

For Latest News Updates, Join Our Whatsapp Community🚩
RELATED ARTICLES

Most Popular