HomeLatest Newsಪ್ರತಿನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಪ್ರತಿನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಪೇಸ್ಟ್ ತಯಾರಿಕೆಯಲ್ಲಿ ಹಲವು ರಾಸಾಯನಿಕಗಳನ್ನು ಬಳಸುತ್ತಾರೆ ಎಂಬ ಸಂಗತಿಯನ್ನು ಓದಿ ಕೇಳಿ ನಾವು ತಿಳಿದಿದ್ದೇವೆ. ಆದರೂ ರೂಢಿಗತವಾಗಿ ಬಂದ ಪೇಸ್ಟ್ ಹಾಕಿ ಹಲ್ಲುಜ್ಜುವ ಅಭ್ಯಾಸವನ್ನು ಬಿಡಲು ಸಾಧ್ಯವಿಲ್ಲ ಅಲ್ಲವೇ. ಅದಕ್ಕಾಗಿ ನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ.

ನೀಮ್ ಪೌಡರ್, ಲವಂಗದ ಪುಡಿ, ಅಡುಗೆ ಸೋಡಾ, ಕಲ್ಲುಪ್ಪು, ಒಣಗಿದ ಪುದೀನಾ ಎಲೆಯ ಪೌಡರ್ ಅನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಇವುಗಳ ಚೂರ್ಣ ತಯಾರಿಸಿಡಿ. ಪೇಸ್ಟ್ ಬದಲಿಗೆ ಇದರಿಂದ ಬೆಳಿಗ್ಗೆ ಹಾಗೂ ಸಂಜೆ ಹಲ್ಲುಜ್ಜಿ. ಸ್ವಲ್ಪ ದಿನ ಕಷ್ಟವಾದರೂ ಅಭ್ಯಾಸವಾದ ಬಳಿಕ ಇದು ನಿಮ್ಮ ನೆಚ್ಚಿನ ಪೇಸ್ಟ್ ಆಗುತ್ತದೆ.

ಇದರಿಂದ ದಿನಕ್ಕೆರಡು ಬಾರಿ ಹಲ್ಲುಜ್ಜುವುದರಿಂದ ಹಲ್ಲಿನ ಸೆನ್ಸಿಟಿವಿಟಿ ಕಡಿಮೆಯಾಗುತ್ತದೆ. ಪದೇ ಪದೇ ಕಾಡುವ ಹಲ್ಲು ನೋವಿನ ಸಮಸ್ಯೆ ದೂರವಾಗುತ್ತದೆ. ಬಾಯಿಂದ ಹೊರ ಸೂಸುವ ದುರ್ಗಂಧದ ಸಮಸ್ಯೆಯೂ ಇಲ್ಲವಾಗುತ್ತದೆ. ಈ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ಹಾಕಿಟ್ಟರೆ ತಿಂಗಳ ತನಕವೂ ಬಳಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೂತ್ ಪೇಸ್ಟ್ ಬಳಕೆ ಅನಿವಾರ್ಯವಾಗಿರುವ ಈ ಕಾಲಘಟ್ಟದಲ್ಲಿ ಸಾಧ್ಯವಾದಷ್ಟು ಔಷಧೀಯ ಸಸ್ಯಗಳಿಂದ ತಯಾರಿಸಿದ ಟೂತ್ ಪೇಸ್ಟ್ ಬಳಸಿ. ರಾಸಾಯನಿಕಯುಕ್ತ ಪೇಸ್ಟ್ ಗಳಿಂದ ಹಲ್ಲಿಗೆ ಸಂಬಂಧಪಟ್ಟ ಯಾವ ಕಾಯಿಲೆಗಳೂ ಕಡಿಮೆಯಾಗುವುದಿಲ್ಲ ಎಂಬುದನ್ನು ನೆನಪಿಡಿ.

For Latest News Updates, Join Our Whatsapp Community🚩
RELATED ARTICLES

Most Popular