HomeRecipiesಆರೋಗ್ಯಕರ ಹಾಗೂ ರುಚಿಕರ 'ರಾಗಿ ಲಡ್ಡು' ಮಾಡಿ ನೋಡಿ

ಆರೋಗ್ಯಕರ ಹಾಗೂ ರುಚಿಕರ ‘ರಾಗಿ ಲಡ್ಡು’ ಮಾಡಿ ನೋಡಿ

ರಾಗಿ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಹಾಗೂ ಓಟ್ಸ್ ಇವೆರೆಡನ್ನು ಸೇರಿಸಿಕೊಂಡು ಲಡ್ಡು ಮಾಡಿದರೆ ತಿನ್ನುವುದಕ್ಕೆ ರುಚಿಯಾಗಿರುತ್ತದೆ. ಜತೆಗೆ ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಾಗ್ರಿ: 1 ಕಪ್ ರಾಗಿ ಹಿಟ್ಟು, 1 ಕಪ್ ಓಟ್ಸ್ , 20 ಖರ್ಜೂರ, ¼ ಕಪ್ ಹಾಲು, 3 ದೊಡ್ಡ ಚಮಚ ತುಪ್ಪ, ½ ಕಪ್ ಜೇನುತುಪ್ಪ, 1 ಟೀ ಸ್ಪೂನ್- ಏಲಕ್ಕಿ ಪುಡಿ, ¼ ಕಪ್ ಬಿಳಿ ಎಳ್ಳು, ¼ ಕೊಬ್ಬರಿ ತುರಿ, 10 ಗೋಡಂಬಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ: ಓಟ್ಸ್ ಅನ್ನು ಒಂದು ಪ್ಯಾನ್ ಗೆ ಹಾಕಿ ಹುರಿದುಕೊಂಡು ಪುಡಿ ಮಾಡಿಕೊಳ್ಳಿ. 15 ಖರ್ಜೂರವನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಹಾಲು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಖರ್ಜೂರವನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಬಿಳಿ ಎಳ್ಳು ಹಾಗೂ ಗೋಡಂಬಿಯನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ.

ಒಂದು ಪ್ಯಾನ್ ಗೆ ಸ್ವಲ್ಪ ತುಪ್ಪ ಹಾಕಿ ಓಟ್ಸ್ ಪುಡಿಯನ್ನು ಹುರಿದುಕೊಳ್ಳಿ. ಹಾಗೇ ಇನ್ನೊಂದು ಪ್ಯಾನ್ ಗೆ ಸ್ವಲ್ಪ ತುಪ್ಪ ಸೇರಿಸಿ ರಾಗಿ ಹಿಟ್ಟನ್ನು ಹುರಿದುಕೊಳ್ಳಿ. ನಂತರ ರಾಗಿ ಹಿಟ್ಟು ಹಾಗೂ ಓಟ್ಸ್ ಹಿಟ್ಟು ಎರಡನ್ನು ಒಟ್ಟು ಸೇರಿಸಿ ಮಂದ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ರುಬ್ಬಿಟ್ಟುಕೊಂಡ ಖರ್ಜೂರದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗುವುದಕ್ಕೆ ಬಿಟ್ಟುಬಿಡಿ.

ನಂತರ ಇದಕ್ಕೆ ಉಳಿದ ಜೇನುತುಪ್ಪ ಗೋಡಂಬಿ, ಖರ್ಜೂರ, ಬಿಳಿ ಎಳ್ಳನ್ನು  ಸೇರಿಸಿ ಚೆನ್ನಾಗಿ ನಾದಿ ಉಂಡೆ ಕಟ್ಟುವ ಹದಕ್ಕೆ ಮಾಡಿಕೊಳ್ಳಿ. ಇದರಿಂದ ಚಿಕ್ಕ ಚಿಕ್ಕದಾದ ಉಂಡೆ ಕಟ್ಟಿ ತೆಂಗಿನ ಕಾಯಿ ತುರಿಯಲ್ಲಿ ಹೊರಳಾಡಿಸಿದರೆ ರುಚಿಕರವಾದ ರಾಗಿ ಲಡ್ಡು ತಿನ್ನಲು ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular