HomeRecipiesಥಟ್‌ ಅಂತ ಮಾಡಿ ಸವಿದು ನೋಡಿ ‘ನೆಲ್ಲಿಕಾಯಿ ತಂಬುಳಿ’

ಥಟ್‌ ಅಂತ ಮಾಡಿ ಸವಿದು ನೋಡಿ ‘ನೆಲ್ಲಿಕಾಯಿ ತಂಬುಳಿ’

ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು ತಿನ್ನುವುದಕ್ಕೆ ಬೇಜಾರು ಅನಿಸಿದಾಗ ನೆಲ್ಲಿಕಾಯಿ ಬಳಸಿ ಮಾಡಿ ಈ ತಂಬುಳಿ.

ಮೊದಲಿಗೆ 3 ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಅದರ ಬೀಜ ತೆಗೆದು ಕತ್ತರಿಸಿಕೊಳ್ಳಿ. ನಂತರ ¼ ಸ್ಪೂನ್ ಎಣ್ಣೆಯನ್ನು ಒಂದು ಚಿಕ್ಕ ಪ್ಯಾನ್ ಗೆ ಹಾಕಿಕೊಂಡು ಅದಕ್ಕೆ 1/4 ಟೀ ಸ್ಪೂನ್ ಜೀರಿಗೆ ಹಾಕಿ ನಂತರ 1 ಹಸಿಮೆಣಸು ಕತ್ತರಿಸಿ ಹಾಕಿ ಫ್ರೈ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ತಣ್ಣಗಾದ ಮೇಲೆ ಇದನ್ನು ಮಿಕ್ಸಿ ಜಾರಿಗೆ ಹಾಕಿ ಇದಕ್ಕೆ 2 ಟೇಬಲ್ ಸ್ಪೂನ್ ತೆಂಗಿನಕಾಯಿ ತುರಿ ಸೇರಿಸಿ ತುಸು ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಇದಕ್ಕೆ 1 ಕಪ್ ಮೊಸರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಕ್ಸ್ ಮಾಡಿದರೆ ರುಚಿಯಾದ ತಂಬುಳಿ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular