HomeIndiaBIG NEWS: ರೈಲ್ವೆ ಟ್ರ್ಯಾಕ್ ಮೇಲೆ ಕಬ್ಬಿಣದ ರಾಡ್, ಕಲ್ಲುಗಳನ್ನು ಇಟ್ಟ ಕಿಡಿಗೇಡಿಗಳು; ವಂದೇ ಭಾರತ್...

BIG NEWS: ರೈಲ್ವೆ ಟ್ರ್ಯಾಕ್ ಮೇಲೆ ಕಬ್ಬಿಣದ ರಾಡ್, ಕಲ್ಲುಗಳನ್ನು ಇಟ್ಟ ಕಿಡಿಗೇಡಿಗಳು; ವಂದೇ ಭಾರತ್ ಎಕ್ಸ್ ಪ್ರೆಸ್ ತುರ್ತು ನಿಲುಗಡೆ

ಜೈಪುರ: ರೈಲ್ವೆ ಟ್ರ್ಯಾಕ್ ಮೇಲೆ ಕಿಡಿಗೇಡಿಗಳು ಕಲ್ಲು, ಕಬ್ಬಿಣದ ರಾಡ್ ಗಳನ್ನು ಇಟ್ಟು ಹುಚ್ಚಾಟ ಮೆರೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರೈಲ್ವೆ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.

ಉದಯಪುರ ಹಾಗೂ ಜೈಪುರದ ನಡುವಿನ ರೈಲ್ವೆ ಟ್ರ್ಯಾಕ್ ಒಂದರ ಮೇಲೆ ಕಿಡಿಗೇಡಿಗಳು ಕಲ್ಲು, ಕಬ್ಬಿಣದ ರಾಡ್ ಗಳನ್ನು ಇಟ್ಟಿದ್ದಾರೆ. ಇದೇ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬರುತ್ತಿತ್ತು. ರೈಲ್ವೆ ಪೈಲಟ್ ಇದನ್ನು ಗಮನಿಸಿ ತುರ್ತಾಗಿ ರೈಲು ನಿಲುಗಡೆ ಮಾಡಿದ್ದು, ಸಂಭವಿಸಲಿದ್ದ ಭಾರಿ ಅನಾಹುತವನ್ನು ತಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ರೈಲ್ವೆ ಹಳಿಗಳ ಮೇಲಿದ್ದ ಕಲ್ಲು ಹಾಗೂ ಕಬ್ಬಿಣದ ರಾಡ್ ಗಳನ್ನು ರೈಲ್ವೆ ಪೊಲೀಸ್ ಸಿಬ್ಬಂದಿಗಳು ತೆರಳುಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ತನಿಖೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular