HomeLatest NewsBIG NEWS : ಜುಲೈ 25 ರಂದು ರಾಜ್ಯಾದ್ಯಂತ ವರ್ತಕರ ಮುಷ್ಕರ : ಏನಿರುತ್ತೆ..? ಏನಿರಲ್ಲ.!...

BIG NEWS : ಜುಲೈ 25 ರಂದು ರಾಜ್ಯಾದ್ಯಂತ ವರ್ತಕರ ಮುಷ್ಕರ : ಏನಿರುತ್ತೆ..? ಏನಿರಲ್ಲ.! ಇಲ್ಲಿದೆ ಮಾಹಿತಿ

ಬೆಂಗಳೂರು: ವಾರ್ಷಿಕ 40 ಲಕ್ಷ ರೂಪಾಯಿ ವಹಿವಾಟು ನಡೆಸಿದ ಸಣ್ಣ ಉದ್ದಿಮೆದಾರರಿಗೆ ಏಕಾಏಕಿ ನೋಟಿಸ್ ಜಾರಿ ಮಾಡಿದ ವಾಣಿಜ್ಯ ತೆರಿಗೆ ಇಲಾಖೆ ಕ್ರಮ ವಿರೋಧಿಸಿ ಮುಷ್ಕರ ನಡೆಸಲು ರಾಜ್ಯಕಾರ್ಮಿಕ ಪರಿಷತ್ ನಿರ್ಧರಿಸಿದೆ. ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟ್ ಮಾರಾಟ ಮಾಡುವುದನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಜು 23 ರಿಂದ ಜುಲೈ 25 ರವರೆಗೆ ಹಂತ ಹಂತವಾಗಿ ಅಂಗಡಿ ಬಂದ್ ಮಾಡಲಾಗುತ್ತದೆ.

ಏನಿರುತ್ತೆ..? ಏನಿರಲ್ಲ..?
1) ಜುಲೈ 23-24 ರಂದು ಹಾಲು ಮಾರಾಟ ಬಂದ್
2) ಜುಲೈ 25 ರಂದು ಅಂಗಡಿ ಮುಂಗಟ್ಟುಗಳು ಬಂದ್
3) ಜುಲೈ 23-24 ರಂದು ಕಪ್ಪು ಪಟ್ಟಿ ಧರಿಸಿ ಹಾಲು ಇಲ್ಲದ ಕಾಫಿ, ಚಹಾ ಮಾರಾಟ
4) ಬೇಕರಿ ತಿನಿಸುಗಳು, ಕಾಫಿ ಟೀ ಶಾಪ್ , ದಿನಸಿ ವಸ್ತುಗಳು, ಹಾಲಿನ ಉತ್ಪನ್ನಗಳು ಸಿಗೋದು ಅನುಮಾನ
5) ಜು.25 ರಂದು ಬೇಕರಿ, ಕಾಫಿ, ಟೀ ಶಾಪ್ ಸಂಪೂರ್ಣ ಬಂದ್ ಆಗಲಿದೆ. ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟ್ ಸಿಗಲ್ಲ.
6) ಜು.25 ರಂದು ಬೇಕರಿ, ಕಾಫಿ, ಟೀ ಶಾಪ್ , ಬೇಕರಿ ತಿನಿಸುಗಳು ಸಂಪೂರ್ಣ ಬಂದ್ ಆಗಲಿದ್ದು, ಉಳಿದಂತೆ ಎಲ್ಲಾ ಸೇವೆಗಳು ಸಿಗಲಿದೆ.

ಜುಲೈ 23, 24ರಂದು ಕೇಂದ್ರದ ವಿರುದ್ಧ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುವುದು. ಜು. 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೆರಿಗೆ ಕಟ್ಟುವಂತೆ ಏಕಾಏಕಿ ನೋಟಿಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಎರಡು ದಿನ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಇರುವುದಿಲ್ಲ. ಯಾವುದೇ ಮುನ್ಸೂಚನೆ ನೀಡದೆ ತೆರಿಗೆ ನೋಟಿಸ್ ನೀಡಲಾಗಿದೆ. ಈ ಕ್ರಮ ಸರಿಯಲ್ಲ, ಸಾವಿರ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಂಗಡಿಗಳಿಗೆ ಭಾರಿ ಮೊತ್ತದ ತೆರಿಗೆ ಪಾವತಿಗೆ ನೋಟಿಸ್ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular