ರಾಯಚೂರು: ಗೊಬ್ಬರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಕೆರೆಗೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ನಾಲ್ಕನೇ ಮೈಲ್ ಕ್ಯಾಂಪ್ ಬಳಿ ನಡೆದಿದೆ.
ವಿರೂಪನಗೌಡ ಅಯ್ಯನಗೌಡ(50), ಸುಖ ಮುನಿಯಪ್ಪ ಸಂತೇರ್(30) ಮೃತಪಟ್ಟವರು. ಶನಿವಾರ ತಿಪ್ಪೆ ಗೊಬ್ಬರವನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಹೊಲಕ್ಕೆ ಸಾಗಿಸುತ್ತಿದ್ದರು. ಮಾರ್ಗ ಮಧ್ಯ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಕೆರೆಗೆ ಮಗುಚಿ ಬಿದ್ದಿದೆ. ಟ್ಯಾಕ್ಟರ್ ನಲ್ಲಿದ್ದ ಇಬ್ಬರೂ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

