ಕೆಜಿಎಫ್ ಚಿತ್ರ ಸರಣಿಯ ಮೂಲಕ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಹಲವಾರು ಬೃಹತ್ ದಾಖಲೆಯನ್ನು ನಿರ್ಮಿಸಿ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆದಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಚಿತ್ರ ಟಾಕ್ಸಿಕ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
ಇದೇ 26ರಂದು ಟಾಕ್ಸಿಕ್ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಪ್ಯಾನ್ ಇಂಡಿಯಾ ಮಾತ್ರವಲ್ಲದೇ ಇಂಗ್ಲಿಷ್ ಭಾಷೆಯಲ್ಲೂ ಸಹ ಡಬ್ ಆಗಿ ತೆರೆಗೆ ಅಪ್ಪಳಿಸಲಿದೆ. ಇನ್ನು ಚಿತ್ರತಂಡ ಚಿತ್ರದ ಮುಂಗಡ ಬುಕಿಂಗ್ ಅನ್ನು ಇಂದಿನಿಂದ ( ಆಗಸ್ಟ್ 21 ) ಆರಂಭಿಸುವುದಾಗಿ ಘೋಷಣೆ ಮಾಡಿತ್ತು.
ಅದರಂತೆ ಇಂದು ಬೆಳ್ಳಂಬೆಳಗ್ಗೆ ಚಿತ್ರದ ಅಡ್ವಾನ್ಸ್ ಬುಕಿಂಗ್ ತೆರೆಯಲ್ಪಟ್ಟಿದ್ದು, ಚಿತ್ರದ ಬುಕಿಂಗ್ ಕೆಜಿಎಫ್ 2 ಚಿತ್ರವನ್ನು ಸರಿದೂಗಿಸುವ ಹಂತಕ್ಕೆ ಸಾಗಿದೆ ಎಂದರೆ ತಪ್ಪಾಗಲಾರದು. ಹೌದು, ಟಾಕ್ಸಿಕ್ ಮುಂಗಡ ಬುಕಿಂಗ್ ಆರಂಭವಾಗುತ್ತಿದ್ದಂತೆ ಟಿಕೆಟ್ ಖರೀದಿಗಾಗಿ ಮುಗಿಬಿದ್ದಿರುವ ಸಿನಿ ರಸಿಕರು ಬುಕ್ ಮೈಶೋನಲ್ಲಿ ಶೋಗಳಿಗೆ ಕೇಸರಿ ಬಣ್ಣ ಬಳಿದಿದ್ದಾರೆ, ಎಲ್ಲೆಡೆ ಶೋಗಳು ಫಾಸ್ಟ್ ಫಿಲ್ಲಿಂಗ್ ಹಾಗೂ ಸೋಲ್ಟ್‌ಔಟ್ ಆಗಿವೆ.
ಇನ್ನು ಬುಕಿಂಗ್ ಆರಂಭವಾದ ಎರಡೇ ಗಂಟೆಗಳಲ್ಲಿ ಭಾರತದಾದ್ಯಂತ ಟಾಕ್ಸಿಕ್ ಬರೋಬ್ಬರಿ 4 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಹೀಗೆ ಫಸ್ಟ್ ಬಾಲ್ ಸಿಕ್ಸರ್ ಚಚ್ಚಿರುವ ಟಾಕ್ಸಿಕ್ ಬುಕಿಂಗ್ ಇನ್ನೂ ಬಲಿಷ್ಟವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳಿದ್ದು, ಮೊದಲ ದಿನ ಭಾರತದಲ್ಲೇ ನೂರು ಕೋಟಿ ಓಪನಿಂಗ್ ಪಡೆಯುವುದು ಪಕ್ಕಾ ಎನ್ನಬಹುದಾಗಿದೆ.
ಸದ್ಯ ಬೆಳಗ್ಗೆ 9.30ರ ಸಮಯಕ್ಕೆ ಬುಕ್ ಮೈ ಶೋನಲ್ಲಿ ಕಳೆದ ಒಂದು ಗಂಟೆಯಲ್ಲಿ 17000 ಟಿಕೆಟ್‌ಗಳು ಬುಕ್ ಆಗಿದೆ. ದೇಶದ ಪ್ರಮುಖ ನಗರಗಳ ಬುಕಿಂಗ್‌ಗೇ ಈ ಮಟ್ಟದ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲ ನಗರಗಳ ಬುಕಿಂಗ್ ತೆರೆದರೆ ಟಾಕ್ಸಿಕ್ ಅಲೆ ದೈತ್ಯ ರೂಪ ಪಡೆದುಕೊಳ್ಳುವುದು ಪಕ್ಕಾ.
ಅತ್ತ ಯಶ್ ತವರೂರು ಮೈಸೂರಿನಲ್ಲಿ ಇಲ್ಲಿಯವರೆಗೆ ಒಟ್ಟು ನಾಲ್ಕು ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಅಡ್ವಾನ್ಸ್ ಬುಕಿಂಗ್ ತೆರೆದಿದ್ದು, ಎಲ್ಲೆಡೆ ಸೋಲ್ಡ್‌ಔಟ್ ಆಗಿದ್ದು, ಬುಕಿಂಗ್‌ಗಾಗಿ ಕಾಯುತ್ತಿದ್ದ ಸಿನಿ ರಸಿಕರು ಕೆಲವೇ ನಿಮಿಷಗಳಲ್ಲಿ ಸೋಲ್ಡ್‌ಔಟ್ ಆಗಿದ್ದನ್ನು ಕಂಡು ಟಿಕೆಟ್ ಇಲ್ಲ ಸ್ವಾಮಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

