ಅರ್ಜುನ್ ಕಪಿಕ್ಕಾಡ್ ಹಾಗೂ ಸುತೇಜ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಟಾಸ್’ ಸಿನಿಮಾದ ‘ಬೇಡ ಯಾವ ಸುಂದರಿ’ ಎಂಬ ವೀಡಿಯೋ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆಯನ್ನು ಸೆಳೆಯುವ ರೀತಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಖ್ಯಾತ ಗಾಯಕ ನಕಾಶ್ ಅಜೀಜ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಈ ಗೀತೆಗೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗಾರ್ಜುನ್ ಶರ್ಮಾ ಅವರ ಸಾಹಿತ್ಯ ಹಾಗೂ ದೀಕ್ಷಿತ್ ಕುಮಾರ್ ಅವರ ನೃತ್ಯ ನಿರ್ದೇಶನ ಹಾಡಿನ ರಂಗನ್ನು ಹೆಚ್ಚಿಸಿದೆ. ಚಿತ್ರಕ್ಕೆ ಅರ್ಜುನ್ ದೇವ್ ನಿರ್ದೇಶನವಿದ್ದು, ಡಾ. ದೇವದಾಸ್ ಕಪಿಕ್ಕಾಡ್ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಇದೆ. ಸಾಗರ್ ಪೂಜಾರಿ ಅವರ ಪಿ ಆಂಡ್ ವೈ ವರ್ಲ್ಡ್ ಟೂರ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
ಜೋಯಲ್ ಶಮನ್ ಡಿಸೋಜಾ ಅವರ ಛಾಯಾಗ್ರಹಣ ಹಾಗೂ ಯಶ್ವಿನ್ ಕೆ ಶೆಟ್ಟಿಗಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಧೀಲಿಪ್ ಎಂ ರಾಜ್, ಅರ್ಜುನ್ ರಾಜ್ ಮತ್ತು ಟೈಗರ್ ಶಿವ ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಹಾಡು ಯೂಟ್ಯೂಬ್‌ನಲ್ಲಿ ಉತ್ತಮ ವೀಕ್ಷಣೆ ಪಡೆಯುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

