’ಅರ್ಬನ್ ಟ್ರಿಂ’ ಕ್ರಾಟೋಸ್ ಆರ್‌ ಬಿಡುಗಡೆ ಮಾಡಿದ ಟಾರ್ಕ್ ಮೋಟರ್ಸ್; ಇಲ್ಲಿದೆ ಬೆಲೆ ಸೇರಿದಂತೆ ಇದರ ವಿಶೇಷತೆ

ದ್ವಿಚಕ್ರ ವಾಹನ ಸಂಸ್ಥೆ ಟಾರ್ಕ್ ಮೋಟರ್ಸ್ ತನ್ನ ಕ್ರಾಟೋಸ್ ಆರ್‌ನ ಅರ್ಬನ್ ಟ್ರಿಮ್ ವರ್ಶನ್‌ ಅನ್ನು ಬಿಡುಗಡೆ ಮಾಡಿದೆ. ನಗರ ಪ್ರದೇಶಗಳಲ್ಲಿ ಪ್ರತಿನಿತ್ಯದ ಸಂಚಾರಕ್ಕೆ ಈ ಬೈಕ್ ಸೂಕ್ತವಾಗಿದೆ.

’ಸಿಟಿ ಮೋಡ್‌’ಗೆ ತಕ್ಕಂತೆ 4ಕಿವ್ಯಾಎನ್‌ ಲಿಥಿಯಂ-ಐಯಾನ್ ಬ್ಯಾಟರಿ ಮಾರ್ಪಾಡು ಮಾಡಿರುವ ಟಾರ್ಕ್ ಮೋಟರ್ಸ್‌ನ ಕ್ರಾಟೋಸ್ ಆರ್‌‌‌ 70ಕಿಮೀ/ಗಂಟೆ ಗರಿಷ್ಠ ವೇಗದಲ್ಲಿ ಚಲಿಸಬಲ್ಲದಾಗಿದ್ದು, ಒಮ್ಮೆ ಬ್ಯಾಟರಿ ಪೂರ್ಣವಾಗಿ ಚಾರ್ಜ್ ಆದಲ್ಲಿ 100 ಕಿಮೀ ದೂರ ಸಾಗಬಲ್ಲದಾಗಿದೆ. ಈ ಬ್ಯಾಟರಿ 12.06 ಬಿಎಚ್‌ಪಿ ಹಾಗೂ 38ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದನೆ ಮಾಡಬಲ್ಲದಾಗಿದೆ.

ಬಹು ರೈಡ್ ಮೋಡ್ (ಇಕೋ, ಸಿಟಿ ಮತ್ತು ಸ್ಪೋರ್ಟ್ಸ್), ರಿವರ್ಸ್ ಮೋಡ್, ತ್ವರಿತ ಚಾರ್ಜಿಂಗ್, ಇನ್‌-ಆಪ್ ನೇವಿಗೇಷನ್, ಬ್ಲೂಟೂತ್‌ ಮೂಲಕ ಲೈವ್‌ ಡ್ಯಾಶ್, ವಾಹನದ ಲೊಕೇಟರ್‌, ಕಳ್ಳತನ ನಿರೋಧಕ ವ್ಯವಸ್ಥೆ, ಜಿಯೋ ಫೆನ್ಸಿಂಗ್, ಚಾರ್ಜಿಂಗ್ ಪಾಯಿಂಟ್ ಲೊಕೇಶನ್, ಒಟಿಎ ಮೇಲ್ದರ್ಜೆಗಳು, ಸ್ಮಾರ್ಟ್ ಅನಲಿಟಿಕ್ಸ್, ರೈಡ್ ಅನಲಿಟಿಕ್ಸ್‌, ಗೈಡಿ ಮಿ ಹೋಂ ಲೈಟ್‌ಗಳಂಥ ಆಕರ್ಷಕ ಫೀಚರ್‌ಗಳನ್ನು ಒಳಗೊಳ್ಳಲು ಬೈಕ್‌ನ ಬೆಲೆಯ ಮೇಲೆ 20,000 ರೂ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ. \

ಸ್ಟ್ರೀಕಿ ರೆಡ್, ಓಶಿಯಾನಿಕ್ ಬ್ಲೂ, ಮಿಡ್‌ನೈಟ್ ಬ್ಲಾಕ್‌ನಂಥ ಆಕರ್ಷಕ ಬಣ್ಣಗಳಲ್ಲಿ ಟಾರ್ಕ್ ಕ್ರಾಟೋಸ್ ಆರ್‌ ಲಭ್ಯವಿದೆ. ಈ ಬೈಕ್‌ನ ಬೆಲೆ 1.67 ಲಕ್ಷ ರೂ. (ಎಕ್ಸ್‌ಶೋರೂಂ) ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read