ಬೆಂಗಳೂರು: ಪೋಷಕರು ಸಾಲಸೋಲ ಮಾಡಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿರುತ್ತಾರೆ. ಆದರೆ ಓದು ಮುಗಿಸಿ ಹೊರಬಂದಾಗ ಅಂದುಕೊಂಡ ಸಂಬಳದ ಕೆಲಸ ಸಿಗುವುದು ಸುಲಭವಲ್ಲ. ಒಂದು ವೇಳೆ ನೀವು ಪ್ರತಿಭಾವಂತರಾಗಿದ್ದು, ಈಗಷ್ಟೇ ಪದವಿ ಮುಗಿಸಿ ಕೆಲಸ ಹುಡುಕುತ್ತಿದ್ದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ ಇದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಕೆಲವು ಟಾಪ್ ಕಂಪನಿಗಳು ಫ್ರೆಶರ್ಗಳಿಗೆ ಮೊದಲ ಕೆಲಸದಲ್ಲೇ ಲಕ್ಷಾಂತರ ರೂಪಾಯಿ ಪ್ಯಾಕೇಜ್ ನೀಡುತ್ತಿವೆ.ಹಾಗಾದರೆ, ಫ್ರೆಶರ್ಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಆ ಟಾಪ್ 5 ಕಂಪನಿಗಳು ಯಾವುವು? ಇಲ್ಲಿದೆ ನೋಡಿ ಮಾಹಿತಿ
1.ಅಟ್ಲಾಸಿಯನ್ (Atlassian) 🇦🇺🇺🇸
ಇದು ಸಾಫ್ಟ್ವೇರ್ ಅಭಿವೃದ್ಧಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಉಪಕರಣಗಳನ್ನು ತಯಾರಿಸುವ ಪ್ರಸಿದ್ಧ ಕಂಪನಿ. ಇಲ್ಲಿ ನೀವು ಫ್ರೆಶರ್ ಆಗಿ ಸೇರಿದರೆ ವರ್ಷಕ್ಕೆ 32 ರಿಂದ 100 ಲಕ್ಷ ರೂಪಾಯಿ (LPA) ವರೆಗೂ ಸಂಬಳ ಪಡೆಯಬಹುದು.
2.ಅಡೋಬ್ (Adobe) 🇺🇸
ಡಿಜಿಟಲ್ ಕ್ರಿಯೇಶನ್ ಮತ್ತು ಮಾರ್ಕೆಟಿಂಗ್ ಸಾಫ್ಟ್ವೇರ್ಗಳಲ್ಲಿ ಜಗತ್ತಿನಲ್ಲೇ ಹೆಸರುವಾಸಿಯಾಗಿರುವ ಅಡೋಬ್ ಕಂಪನಿಯು, ಪ್ರತಿಭಾವಂತ ಫ್ರೆಶರ್ಗಳಿಗೆ ವರ್ಷಕ್ಕೆ ಸುಮಾರು 62 ಲಕ್ಷ ರೂಪಾಯಿ (LPA) ವರೆಗೂ ವೇತನ ನೀಡುತ್ತದೆ.
3.ಗೂಗಲ್ (Google)
ಇಂಟರ್ನೆಟ್ ಲೋಕದ ದೈತ್ಯ ಗೂಗಲ್ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಸುಮಾರು 30 ಲಕ್ಷ ರೂಪಾಯಿ (LPA) ವರೆಗೂ ಸ್ಯಾಲರಿ ಪ್ಯಾಕೇಜ್ ನೀಡುತ್ತಿದೆ.
4.ಮೈಕ್ರೋಸಾಫ್ಟ್ (Microsoft)
ಮೈಕ್ರೋಸಾಫ್ಟ್ ಕಂಪನಿಯು ಬೆಂಗಳೂರಿನಲ್ಲಿ ಫ್ರೆಶರ್ಗಳಿಗಾಗಿ ಬಾಗಿಲು ತೆರೆದಿದ್ದು, ಆರಂಭಿಕ ಹಂತದಲ್ಲೇ ಸುಮಾರು 15 ರಿಂದ 30 ಲಕ್ಷ ರೂಪಾಯಿ (LPA) ವರೆಗೂ ಸಂಬಳದ ಆಫರ್ ನೀಡುತ್ತಿದೆ.
5.ಅಮೆಜಾನ್ (Amazon)
ಇ-ಕಾಮರ್ಸ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದ ಅಧಿಪತಿ ಅಮೆಜಾನ್ ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ವರ್ಷಕ್ಕೆ 20 ಲಕ್ಷ ರೂಪಾಯಿ (LPA) ಜೊತೆಗೆ ಆಕರ್ಷಕ ಬೋನಸ್ಗಳನ್ನು ಕೂಡ ನೀಡುತ್ತದೆ.

