ತೊಂಡೆಕಾಯಿ: ಮಧುಮೇಹಕ್ಕೆ ಮದ್ದು, ಆರೋಗ್ಯಕ್ಕೆ ವರ !

ತರಕಾರಿ ಇಷ್ಟ ಪಡುವವರಲ್ಲಿ ಹೆಚ್ಚಿನ ಮಂದಿ ತೊಂಡೆಕಾಯಿ ಸೇವಿಸುತ್ತಾರೆ. ಇದರಲ್ಲಿ ಹೆಚ್ಚು ಫೈಬರ್ ಅಂಶವಿದೆ. ಜೊತೆಗೆ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇದ್ದು, ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವುದರಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಯೂ ಪರಿಹಾರವಾಗುತ್ತದೆ. ಕಫ ಸಮಸ್ಯೆ ದೂರವಾಗುತ್ತದೆ. ಮಲಬದ್ಧತೆ ನಿವಾರಣೆಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ತೊಂಡೆಕಾಯಿ ಎಲೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆ ಆಗುತ್ತದೆ. ಎರಡು ಚಮಚ ತೊಂಡೆಕಾಯಿ ಎಲೆ ರಸಕ್ಕೆ ಅರ್ಧ ಬಟ್ಟಲು ಮೊಸರು ಬೆರೆಸಿ ಕುಡಿದರೆ ಬೇಧಿ ನಿಲ್ಲುತ್ತದೆ. ತೊಂಡೆಕಾಯಿ ಹಸಿ ಹಣ್ಣನ್ನು ದಿನಕ್ಕೆ ಎರಡರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದು ಆಗುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ದೇಹದ ಯಾವುದೇ ಭಾಗದಲ್ಲಿ ಹುಳು ಕಚ್ಚಿ ಗಾಯ, ಗುಳ್ಳೆಗಳಿದ್ದರೆ ತೊಂಡೆಕಾಯಿ ಎಲೆಯನ್ನು ಚಚ್ಚಿ ಹಚ್ಚುವುದರಿಂದ ಅದು ನಿವಾರಣೆ ಆಗುತ್ತದೆ. ಪೊಟ್ಯಾಷಿಯಂ ಹೆಚ್ಚಿರುವ ತೊಂಡೆಕಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read