HomeLatest NewsBIG NEWS : ಇಂದು ‘ಭಾರತ್ ಬಂದ್’ : ಏನಿರುತ್ತೆ.. ಏನಿರಲ್ಲ.? ಇಲ್ಲಿದೆ ಸಂಪೂರ್ಣ ಮಾಹಿತಿ

BIG NEWS : ಇಂದು ‘ಭಾರತ್ ಬಂದ್’ : ಏನಿರುತ್ತೆ.. ಏನಿರಲ್ಲ.? ಇಲ್ಲಿದೆ ಸಂಪೂರ್ಣ ಮಾಹಿತಿ

ಫೆಬ್ರವರಿ 12, 2026 ರಂದು ಇಂದು ವಿವಿಧ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಗಳು ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ‘ಭಾರತ್ ಬಂದ್’ (ದೇಶವ್ಯಾಪಿ ಮುಷ್ಕರ) ಕರೆ ನೀಡಿವೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಅಖಿಲ ಭಾರತ ಮಟ್ಟದ ಮುಷ್ಕರ. ಸುಮಾರು 30 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟನೆಗಳು ತಿಳಿಸಿವೆ.

ಹೌದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹತ್ತಕ್ಕೂ ಹೆಚ್ಚು ಕಾರ್ಮಿಕ ಮತ್ತು ರೈತ ಸಂಘಟನೆಗಳು ಫೆಬ್ರವರಿ 12 ರಂದು ದೇಶಾದ್ಯಂತ ‘ಭಾರತ್ ಬಂದ್’ಗೆ ಕರೆ ನೀಡಿವೆ. ಈ ಮುಷ್ಕರದಲ್ಲಿ ಸುಮಾರು 30 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ತಿಳಿಸಿದ್ದಾರೆ.ಕೇಂದ್ರದ “ಕಾರ್ಮಿಕ ವಿರೋಧಿ ಮತ್ತು ಕಾರ್ಪೊರೇಟ್ ಪರ” ನೀತಿಗಳನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಯಾವುದರ ಮೇಲೆ ಪರಿಣಾಮ ಬೀರಬಹುದು? (ಮುಚ್ಚುವ ಸಾಧ್ಯತೆ ಇದೆ)
• ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ವಿಮಾ ಕಚೇರಿಗಳು.
• ಸರ್ಕಾರಿ ಸಾರಿಗೆ ಸೇವೆಗಳು (ಕೆಲವು ರಾಜ್ಯಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ).
• ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಘಟಕಗಳು (PSUs).
• ಕೈಗಾರಿಕಾ ಪ್ರದೇಶಗಳು ಮತ್ತು ಉತ್ಪಾದನಾ ಕೇಂದ್ರಗಳು.
• ಕಲ್ಲಿದ್ದಲು ಮತ್ತು ಉಕ್ಕು ಸೇರಿದಂತೆ ಪ್ರಮುಖ ವಲಯದ ಕಾಮಗಾರಿಗಳು.
• ಗ್ರಾಮೀಣ ಭಾಗದ ಉದ್ಯೋಗ ಖಾತರಿ (MGNREGA) ಕೆಲಸಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ ಸೇವೆಗಳು ಲಭ್ಯವಿರುತ್ತವೆ? (ತೆರೆದಿರುವ ಸಾಧ್ಯತೆ ಇದೆ)
• ಆಸ್ಪತ್ರೆಗಳು ಮತ್ತು ತುರ್ತು ವೈದ್ಯಕೀಯ ಸೇವೆಗಳು.
• ಅಂಬ್ಯುಲೆನ್ಸ್ ಮತ್ತು ಅಗತ್ಯ ಆರೋಗ್ಯ ಸೇವೆಗಳು.
• ಹಾಲು, ತರಕಾರಿ ಮತ್ತು ಫಾರ್ಮಸಿಗಳಂತಹ ಅಗತ್ಯ ವಸ್ತುಗಳ ಸರಬರಾಜು.
• ಮೆಟ್ರೋ ಸೇವೆಗಳು (ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಒಳಪಟ್ಟಿರುತ್ತದೆ).
• ಖಾಸಗಿ ಕಚೇರಿಗಳು ಮತ್ತು ಐಟಿ ಕಂಪನಿಗಳು.
• ಶಾಲೆ ಮತ್ತು ಕಾಲೇಜುಗಳು (ಆಯಾ ರಾಜ್ಯ ಸರ್ಕಾರಗಳ ನಿರ್ಧಾರದಂತೆ).

ಕೇರಳ ಅಥವಾ ಒಡಿಶಾದಷ್ಟು ತೀವ್ರವಾಗಿ ಕರ್ನಾಟಕದಲ್ಲಿ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಕಡಿಮೆ. ಆದರೆ, ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಸಂಚಾರ ಮತ್ತು ಬ್ಯಾಂಕಿಂಗ್ ಮೇಲೆ ಭಾಗಶಃ ಪರಿಣಾಮ ಬೀಳಲಿದೆ. : ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಕ್ಕೂಟಗಳು (AIBEA ಇತ್ಯಾದಿ) ಬೆಂಬಲ ನೀಡಿರುವುದರಿಂದ, ಶಾಖೆಗಳಿಗೆ ತೆರಳಿ ಮಾಡುವ ವ್ಯವಹಾರಗಳಲ್ಲಿ ವಿಳಂಬವಾಗಬಹುದು. ಆನ್‌ಲೈನ್ ಬ್ಯಾಂಕಿಂಗ್ ಎಂದಿನಂತೆ ಇರುತ್ತದೆ.

ಏನಿರುತ್ತೆ? (ಯಥಾಸ್ಥಿತಿ ಲಭ್ಯವಿರುವ ಸೇವೆಗಳು)

ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಸೇವೆಗಳನ್ನು ಬಂದ್‌ನಿಂದ ಹೊರಗಿಡಲಾಗಿದೆ:

  • ತುರ್ತು ಸೇವೆಗಳು: ಆಸ್ಪತ್ರೆಗಳು, ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
  • ಔಷಧಿ ಅಂಗಡಿಗಳು: ಮೆಡಿಕಲ್ ಶಾಪ್‌ಗಳು ತೆರೆದಿರುತ್ತವೆ.
  • ಅಗತ್ಯ ವಸ್ತುಗಳು: ಹಾಲು, ದಿನಪತ್ರಿಕೆ ವಿತರಣೆ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ.
  • ಪೊಲೀಸ್ ಮತ್ತು ಅಗ್ನಿಶಾಮಕ: ರಕ್ಷಣಾ ಪಡೆಗಳು ಮತ್ತು ಅಗ್ನಿಶಾಮಕ ದಳ ಲಭ್ಯವಿರುತ್ತದೆ.
  • ·ತುರ್ತು ಸೇವೆಗಳು: ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ತರಕಾರಿ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ಯಾವುದೇ ಅಡ್ಡಿಯಿಲ್ಲ.
  • ·  ಖಾಸಗಿ ವಾಹನಗಳು: ಆಟೋ, ಟ್ಯಾಕ್ಸಿ ಸಂಘಟನೆಗಳು ನೈತಿಕ ಬೆಂಬಲ ನೀಡಿದ್ದರೂ, ಕೆಲವು ಕಡೆ ವಾಹನ ಸಂಚಾರ ಎಂದಿನಂತೆ ಇರುತ್ತದೆ.
  • ·  ವಿಮಾನ ಮತ್ತು ರೈಲು: ರೈಲು ಮತ್ತು ವಿಮಾನ ಪ್ರಯಾಣದ ವೇಳಾಪಟ್ಟಿಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ.

ಶಾಲಾ-ಕಾಲೇಜುಗಳ ಕಥೆ ಏನು ?

  • ಶಾಲಾ-ಕಾಲೇಜುಗಳಿಗೆ ಸರ್ಕಾರದಿಂದ ಅಧಿಕೃತವಾಗಿ ಸಾರ್ವತ್ರಿಕ ರಜೆ ಘೋಷಿಸಿಲ್ಲ.
  • ಆದರೆ, ಸ್ಥಳೀಯ ಪರಿಸ್ಥಿತಿ ಮತ್ತು ಸಾರಿಗೆ ವ್ಯವಸ್ಥೆಯ ಅಡಚಣೆಯನ್ನು ಗಮನಿಸಿ ಜಿಲ್ಲಾಧಿಕಾರಿಗಳು ಅಥವಾ ಆಯಾ ಶಾಲಾ ಆಡಳಿತ ಮಂಡಳಿಗಳು ರಜೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.

ಸಾರ್ವಜನಿಕರೇ ಗಮನಿಸಿ :   ಈ ಬಂದ್ ಪ್ರಭಾವ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗಬಹುದು. ಆದ್ದರಿಂದ ಪ್ರಯಾಣಿಸುವ ಮುನ್ನ ಸ್ಥಳೀಯ ಸುದ್ದಿಗಳು ಮತ್ತು ಸಾರಿಗೆ ಸಂಸ್ಥೆಗಳ ಅಧಿಕೃತ ಪ್ರಕಟಣೆಯನ್ನು ಗಮನಿಸುವುದು ಸೂಕ್ತ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular