ಬೆಲೆ ಏರಿಕೆ ಬಿಸಿ ನಡುವೆ ಗ್ರಾಹಕರಿಗೆ ಮತ್ತಷ್ಟು ಶಾಕ್; 300ರ ಗಡಿ ತಲುಪಲಿದೆ ಟೊಮೆಟೊ ದರ…!

ನವದೆಹಲಿ: ಕೆಂಪುಸುಂದರಿ ಟೊಮೆಟೊಗೆ ಬಂಗಾರದ ಬೆಲೆ ಬಂದಿದ್ದು, ಕೆಲವೇ ದಿನಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಸಗಟು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ಕೆಜಿ ಟೊಮೆಟೊ ದರ 200 ರೂಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ 300 ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ಸಗಟು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೊಮೆಟೊ ಮಾತ್ರವಲ್ಲ ಇತರ ತರಕಾರಿ ಬೆಲೆಯೂ ಗಗನಮುಖಿಯಾಗಲಿದೆ.

ಎಪಿಎಂಸಿ ಸದಸ್ಯ ಕೌಶಿಕ್ ಹೇಳುವ ಪ್ರಕಾರ ಸಗಟು ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ 160 ರೂಪಾಯಿ ಇದ್ದಿದ್ದು, 200 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ರೀಟೇಲ್ ದರವೂ ಹೆಚ್ಚಲಿದೆ. ಮದರ್ ಡೈರಿ ಸಂಸ್ಥೆ ತನ್ನ ಸಫಲ್ ರೀಟೇಲ್ ಮಳಿಗೆಯಲ್ಲಿ ಟೊಮೆಟೊವನ್ನು ಕೆಜಿಗೆ 259 ರೂಪಾಯಿಗೆ ಮಾರುತ್ತಿದೆ. ಮುಂದಿನ ದಿನಗಳಲ್ಲಿ 300 ರೂಪಾಯಿ ಗಡಿ ದಾಟಿದರೂ ಅಚ್ಚರಿಯಿಲ್ಲ ಎಂದಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ತರಕಾರಿ ಬೆಳೆ ನಾಶವಾಗಿದೆ. ಟೊಮೆಟೊ ಬಿಟ್ಟು ಬೇರೆ ಸರಕು ಸಾಗಾಟ ಕಷ್ಟಸಾಧ್ಯ. ಇದರಿಂದಾಗಿ ಹಿಮಾಚಲ ಪ್ರದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ ಹೀಗಾಗಿ ಬೆಲೆ ಏರಿಕೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರದಿಂದ ಬರುತ್ತಿರುವ ಟೊಮೆಟೊ ಗುಣಮಟ್ಟವೂ ಕಡಿಮೆಯಾಗುತ್ತಿದೆ ಎಂದು ದೆಹಲಿಯ ಆಜಾದ್ ಮಂಡಿ ವರ್ತಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read