HomeKarnatakaBIG NEWS: ಟೊಮೆಟೊ ಗ್ರಾಹಕರಿಗೆ ಗುಡ್ ನ್ಯೂಸ್

BIG NEWS: ಟೊಮೆಟೊ ಗ್ರಾಹಕರಿಗೆ ಗುಡ್ ನ್ಯೂಸ್

ಕೋಲಾರ: ಟೊಮೆಟೊ ಗ್ರಾಹಕರಿಗೆ ಕೊನೆಗೂ ಗುಡ್ ನ್ಯೂಸ್. ಕಳೆದ ಎರಡು ದಿನಗಳಿಂದ ರಾಜ್ಯದ ಕೆಲ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕುಸಿತವಾಗಿದೆ.

ಕೋಲಾರ, ಮಂಗಳೂರು ಸೇರಿದಂತೆ ಕೆಲವೆಡೆಗಳಲ್ಲಿ ಟೊಮೆಟೊ ಬೆಲೆಯಲ್ಲಿ ಕುಸಿತವಾಗಿರುವುದು ಗ್ರಾಹಕರಿಗೆ ಸಂತಸ ತಂದಿದೆ. ಕಳೆದ ಮೂರು ತಿಂಗಳಿಂದ ಗಗನಮುಖಿಯಾಗಿದ್ದ ಟೊಮೆಟೊ ಬೆಲೆ ಕೋಲಾರ ಎಪಿಎಂಸಿಯಲ್ಲಿ ಭಾರಿ ಕುಸಿತವಾಗಿದೆ. 15 ಕೆಜಿ ಟೊಮೆಟೊ ಬಾಕ್ಸ್ ಬೆಲೆ ಸುಮಾರು 800 ರೂಪಾಯಿಯಷ್ಟು ಕಡಿಮೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ತಿಂಗಳ ಹಿಂದಷ್ಟೇ 15 ಕೆಜಿ ಟೊಮೆಟೊ ಬಾಕ್ಸ್ 2400 ರಿಂದ 2700 ರೂಪಾಯಿಗೆ ಹರಾಜಾಗಿತ್ತು. ಕಳೆದ ಎರಡು ದಿನಗಳಿಂದ 15 ಕೆಜಿ ಟೊಮೆಟೊ ಬಾಕ್ಸ್ 1,500 ರೂಪಾಯಿಗೆ ಮಾರಾಟವಾಗುತ್ತಿದೆ.

ಚಿತ್ರದುರ್ಗ, ಮಂಡ್ಯ, ಚಾಮರಾಜನಗರ ಹಾಗೂ ಆಂಧ್ರಪ್ರದೇಶದಿಂದ ರಾಜ್ಯದ ಮಾರುಕಟ್ಟೆಗಳಿಗೆ ಟೊಮೆಟೊ ಪೂರೈಕೆಯಾಗುತ್ತಿರುವುದರಿಂದ ಟೊಮೆಟೊ ದರ ಕಡಿಮೆಯಾಗಿದೆ. ಟೊಮೆಟೊ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular