ʼಹೃದಯʼದ ಆರೋಗ್ಯ ಹೆಚ್ಚಿಸುವ ಟೊಮೆಟೊ ಜ್ಯೂಸ್

ಟೊಮೆಟೊ, ಹಣ್ಣು ಎಂದು ಕರೆಯಿಸಿಕೊಳ್ಳುವ ತರಕಾರಿ. ನಿತ್ಯ ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆಯಬಹುದು ನಿಮಗೆ ಗೊತ್ತೇ?

ಟೊಮೆಟೊ ಸೇವನೆಯಿಂದ ಹಲವು ಬಗೆಯ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಟೊಮೆಟೊ ರಸ ಸೇವಿಸುವುದರಿಂದ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ರಕ್ತದಲ್ಲಿ ಸಂಗ್ರಹಗೊಳ್ಳದಂತೆ ನೋಡಿಕೊಳ್ಳುತ್ತದೆ.

ಹೃದಯ ಸಂಬಂಧಿ ಸಮಸ್ಯೆಗಳು ಬರದಂತೆ ತಡೆಗಟ್ಟುವಲ್ಲಿ ಟೊಮೆಟೊ ಜ್ಯೂಸ್ ಉಪಕಾರಿ. ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಇದು ಕಡಿಮೆ ಮಾಡುತ್ತದೆ. ತ್ವಚೆಯನ್ನು ಪೋಷಿಸುತ್ತವೆ. ಮೊಡವೆಗಳಾಗದಂತೆ ನೋಡಿಕೊಳ್ಳುತ್ತವೆ. ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. ದೇಹದಲ್ಲಿ ಸಂಗ್ರಹವಾದ ಕಲ್ಮಶಗಳನ್ನು ಹೊರಹಾಕುತ್ತದೆ.

ಬೇಯಿಸಿ ಸಾರು, ಸೂಪ್ ರೂಪದಲ್ಲಿ ಸೇವಿಸುವುದಕ್ಕಿಂತ ಹಸಿಯಾಗಿ ತಿನ್ನುವುದು ಬಹಳ ಒಳ್ಳೆಯದು. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಹಾಲಿನಷ್ಟೇ ಟೊಮೆಟೊ ರಸವೂ ಪ್ರಯೋಜನಕಾರಿ ಎನ್ನುತ್ತವೆ ಸಂಶೋಧನೆಗಳು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read