ಹೆತ್ತವರಿಗೆ ಸಹಾಯ ಮಾಡಲು ಪುಟ್ಟ ಮಕ್ಕಳು ಸದಾಕಾಲ ಮುಂದಿರುತ್ತಾರೆ. ಇನ್ನೂ ಮೊದಲ ಹೆಜ್ಜೆಯಿಡುವ ಮಕ್ಕಳು ಸಹ ತಾಯಿಯ ನೆರವಿಗೆ ಸದಾ ಮುಂದಿರುತ್ತಾರೆ. ಪುಟ್ಟ ಮಗು ತನ್ನ ತಾಯಿಯ ಸಹಾಯಕ್ಕೆ ನಿಲ್ಲುವ ಮುದ್ದಾದ ವಿಡಿಯೋವನ್ನ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ವೀಡಿಯೊ ಇಂಟರ್ನೆಟ್‌ನಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ಟ್ರಕ್‌ನಿಂದ ನೀರಿನ ಕ್ಯಾನ್ ಗಳನ್ನು ಇಳಿಸಲು ತನ್ನ ತಾಯಿಗೆ ಅಂಬೆಗಾಲಿಡುವ ಮಗು ಸಹಾಯ ಮಾಡುವುದನ್ನು ಕ್ಲಿಪ್ ತೋರಿಸುತ್ತದೆ. ಚಿಕ್ಕ ಹುಡುಗನ ಪ್ರಯತ್ನವನ್ನು ಇಂಟರ್ನೆಟ್ ಶ್ಲಾಘಿಸಿದೆ.
“ವಯಸ್ಸು ಮತ್ತು ಎತ್ತರದಲ್ಲಿ ಚಿಕ್ಕದಾದರೂ, ಸಹಾಯದ ಭಾವನೆ ತುಂಬಾ ಹೆಚ್ಚಾಗಿದೆ. ಪೋಷಕರು ವಿಶಿಷ್ಟವಾದ ವಜ್ರವನ್ನು ಕೆತ್ತಿದ್ದಾರೆ.” ಎಂದು ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೋದಲ್ಲಿ ತಾಯಿ ಕೂಡ ಬಾಲಕನಿಗೆ ಸಹಾಯ ಮಾಡುತ್ತಿರುವುದನ್ನು ಕಾಣಬಹುದು.
https://twitter.com/ipskabra/status/1625337922412249092?ref_src=twsrc%5Etfw%7Ctwcamp%5Etweetembed%7Ctwterm%5E1625337922412249092%7Ctwgr%5E647e3ccdddc07e4aeddd2b4c43d84df14e53bce9%7Ctwcon%5Es1_&ref_url=https%3A%2F%2Fd-2650667008971191757.ampproject.net%2F2301261900000%2Fframe.html
https://twitter.com/jaysukh44/status/1625350794693287938?ref_src=twsrc%5Etfw%7Ctwcamp%5Etweetembed%7Ctwterm%5E1625350794693287938%7Ctwgr%5Ed33cd9127ba3398daa0c7d62f3a9fb78510ea804%7Ctwcon%5Es1_&ref_url=https%3A%2F%2Fd-2650667008971191757.ampproject.net%2F2301261900000%2Fframe.html
https://twitter.com/ipskabra/status/1625337922412249092?ref_src=twsrc%5Etfw%7Ctwcamp%5Etweetembed%7Ctwterm%5E1625350117606952960%7Ctwgr%5E61378a33de79ddc6a3f8f3c4749b0b95a1efd937%7Ctwcon%5Es2_&ref_url=https%3A%2F%2Fd-2650667008971191757.ampproject.net%2F2301261900000%2Fframe.html