HomeLive Newsಇಂದು ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವಣ ಅಂತಿಮ ಏಕದಿನ ಹಣಾಹಣಿ

ಇಂದು ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವಣ ಅಂತಿಮ ಏಕದಿನ ಹಣಾಹಣಿ

ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಣ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಈಗಾಗಲೇ ಸರಣಿ ತನ್ನದಾಗಿಸಿಕೊಂಡಿರುವ ಶ್ರೀಲಂಕಾ ತಂಡ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ಏಕದಿನ ವಿಶ್ವಕಪ್ ನಲ್ಲಿ ಬಲಿಷ್ಠ ತಂಡಗಳನ್ನೇ ಬಗ್ಗು ಬಡಿದಿದ್ದ ಅಫ್ಘಾನಿಸ್ತಾನ ತಂಡ ಇಂದು ಕೊನೆಯ ಪಂದ್ಯದಲ್ಲಾದರೂ ಜಯಭೇರಿಯಾಗಲಿದೆಯಾ ಕಾದು ನೋಡಬೇಕಾಗಿದೆ.

ಏಕದಿನ ಸರಣಿಯ ಬಳಿಕ ಫೆಬ್ರವರಿ 17 ರಿಂದ ಫೆಬ್ರವರಿ 21 ರವರೆಗೆ ಡಂಬುಲ್ಲಾದಲ್ಲಿ ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯುತ್ತಿದ್ದು, ಮನರಂಜನೆಯ ರಸದೌತಣ ಪಡೆಯಲು ಕ್ರಿಕೆಟ್ ಪ್ರೇಮಿಗಳು ಸಜ್ಜಾಗಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಅಲಭ್ಯರಾಗಿದ್ದ ಅಫ್ಘಾನಿಸ್ತಾನ ಯುವ ಬೌಲರ್ ಶರಫುದ್ದೀನ್ ಅಶ್ರಫ್ ಇಂದು ಕೊನೆಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
RELATED ARTICLES

Most Popular