HomeEntertainmentಇಂದು ನಟ ಸಂಚಾರಿ ವಿಜಯ್ ಜನ್ಮದಿನ

ಇಂದು ನಟ ಸಂಚಾರಿ ವಿಜಯ್ ಜನ್ಮದಿನ

2021 ಜೂನ್ 15 ರಂದು ಬೈಕ್ ಅಪಘಾತದಲ್ಲಿ ನಿಧನರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಾಧನೆ ಮಾಡಿದ್ದಾರೆ. ಇಂದು ಸಂಚಾರಿ ವಿಜಯ್ ಅವರ 41ನೇ ಜನ್ಮದಿನವಾಗಿದ್ದು, ಹಲವಾರು ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋವನ್ನು ಹಂಚಿಕೊಳ್ಳುವ ಮೂಲಕ  ಸ್ಮರಿಸಿದ್ದಾರೆ.

2011ರಲ್ಲಿ ತೆರೆಕಂಡ ‘ರಂಗಪ್ಪ ಹೋಗ್ಬಿಟ್ಟ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ‘ದಾಸವಾಳ’ ‘ಹರಿವು’ ‘ಒಗ್ಗರಣೆ’  ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು. 2015 ರಲ್ಲಿ ‘ನಾನು ಅವನಲ್ಲ ಅವಳು’ ಎಂಬ ಚಿತ್ರದಲ್ಲಿ ಮಂಗಳಮುಖಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಮೂಲಕ  ರಾಷ್ಟ್ರ ಪ್ರಶಸ್ತಿ ದೊರೆಯಿತು. ಇಂದು ಸಂಚಾರಿ ವಿಜಯ್ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು  ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular