HomeAstroಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಮೇಷ ರಾಶಿ

ಇಂದು ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳಿ. ಗೂಢ ವಿದ್ಯೆ ಮತ್ತು ರಹಸ್ಯಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ. ವಿಷಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿದ್ದೀರಿ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ದಿನದ ಆರಂಭ  ಉತ್ತಮವಾಗಿರುತ್ತದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಇತರ ವ್ಯಕ್ತಿಗಳು ಕೂಡ ನಿಮ್ಮ ಬದುಕಿನಲ್ಲಿ ಪ್ರವೇಶ ಮಾಡಬಹುದು. ಸುತ್ತಾಟ ಅಥವಾ ಪ್ರವಾಸ ಆಯೋಜಿಸಲಿದ್ದೀರಿ.

ಮಿಥುನ ರಾಶಿ

ಇವತ್ತು ಅಧಿಕ ಮನರಂಜನೆ ಹಾಗೂ ಆನಂದದಲ್ಲಿ ಕಾಲ ಕಳೆಯಲಿದ್ದೀರಿ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ.

ಕರ್ಕ ರಾಶಿ

ಪ್ರತಿಕೂಲತೆಯಲ್ಲೂ ನೀವು ಪರಿಶ್ರಮಪಡಲಿದ್ದೀರಿ. ಆರೋಗ್ಯದಲ್ಲಿ ಅದರಲ್ಲೂ ಉದರ ಬಾಧೆಯಿಂದ ಸಮಸ್ಯೆಯಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಯಶಸ್ಸು ಸಿಗಲಿದೆ. ಮಧ್ಯಾಹ್ನದ ನಂತರ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.

ಸಿಂಹ ರಾಶಿ

ಇಂದು ಅತ್ಯಂತ ಜಾಗರೂಕರಾಗಿರಿ. ಮನಸ್ಸಿನಲ್ಲಿ ಆತಂಕ ಮೂಡಲಿದೆ. ಶಾರೀರಿಕ ಅಸ್ವಸ್ಥತೆ ಉಂಟಾಗಲಿದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

ಕನ್ಯಾ ರಾಶಿ

ಲಾಭ ಮತ್ತು ಭಾಗ್ಯ ವೃದ್ಧಿಯ ಯೋಗವಿದೆ. ಬಂಧುಗಳಿಂದ ಲಾಭವಿದೆ. ಮಧ್ಯಾಹ್ನದ ನಂತರ ಚಿಂತೆ ಹೆಚ್ಚಾಗಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ತುಲಾ ರಾಶಿ

ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ಜಗಳದಲ್ಲಿ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ನಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಬೇಡಿ. ಕುಟುಂಬದಲ್ಲಿ ತಪ್ಪು ಗ್ರಹಿಕೆ ಮೂಡದಂತೆ ಎಚ್ಚರ ವಹಿಸಿ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಸುಖ-ಸಂತೋಷದ ಅನುಭವವಾಗಲಿದೆ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ.

ಧನು ರಾಶಿ

ದುರ್ಘಟನೆಯ ಬಗ್ಗೆ ಎಚ್ಚರಿಕೆ ವಹಿಸಿ. ಯಾವುದೇ ಚಿಕಿತ್ಸೆಗೆ ಒಳಗಾಗಬೇಡಿ. ಮೋಜು-ಮಸ್ತಿಗಾಗಿ ಅಧಿಕ ಹಣ ಖರ್ಚಾಗುವ ಸಾಧ್ಯತೆ ಇದೆ.

ಮಕರ ರಾಶಿ

ಇಂದು ವ್ಯಾಪಾರ ಮತ್ತು ಉದ್ಯೋಗಕ್ಕೆ ಶುಭ ದಿನ. ಪುತ್ರ ಮತ್ತು ಪತ್ನಿಯಿಂದ ಲಾಭವಾಗಲಿದೆ. ಸಾಂಸಾರಿಕ ಜೀವನದಲ್ಲಿ ಸುಖಮಯ ಪ್ರಸಂಗ ನಡೆಯಲಿದೆ. ಇದರಿಂದ ಮನಸ್ಸಿಗೆ ಆನಂದ ದೊರೆಯಲಿದೆ.

ಕುಂಭ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ವೃತ್ತಿಯಲ್ಲಿ ಯಶಸ್ಸು ನಿಮ್ಮದಾಗಲಿದೆ. ಗೌರವ ಮತ್ತು ಪದೋನ್ನತಿ ದೊರೆಯಲಿದೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಸನ್ನರಾಗಲಿದ್ದಾರೆ.

ಮೀನ ರಾಶಿ

ಬರವಣಿಗೆಗೆ ಇಂದು ಸಮಯ ಅನುಕೂಲಕರವಾಗಿದೆ. ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಯಾತ್ರೆ ಕೈಗೊಳ್ಳಲಿದ್ದೀರಿ. ವಿದೇಶದಲ್ಲಿರುವ ಮಿತ್ರರ ಭೇಟಿಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular