ಮುಂಜಾವಿನ ಜಾಗಿಂಗ್ ಮಾಡುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಟಿಕ್ ಸಿಇಓ ರಾಜಲಕ್ಷ್ಮಿ ವಿಜಯ್ ರಾಮಕೃಷ್ಣನ್‌ರ ಈ ಅನಿರೀಕ್ಷಿತ ಸಾವಿಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.
ಭಾನುವಾರ ಬೆಳಿಗ್ಗೆ 6:30ರ ವೇಳೆ ಮುಂಬಯಿಯ ವರ್ಲಿಯಲ್ಲಿ ಸಂಭವಿಸಿದ ಈ ಅನಾಹುತದಲ್ಲಿ, ಜಾಗಿಂಗ್ ಮಾಡುತ್ತಿದ್ದ ರಾಜಲಕ್ಷ್ಮಿಗೆ ಹಿಂದಿನಿಂದ ಬಂದ ಕಾರೊಂದು ಗುದ್ದಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟಾಟಾ ಮುಂಬಯಿ ಮ್ಯಾರಾಥಾನ್‌ನಲ್ಲಿ ಭಾಗಿಯಾಗಿದ್ದ ವಿಚಾರವನ್ನು ಲಿಂಕ್ಡಿನ್‌ನಲ್ಲಿ ರಾಜಲಕ್ಷ್ಮಿ ಈ ಹಿಂದೆ ಹಂಚಿಕೊಂಡಿದ್ದರು. ಓಟದ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದ ರಾಜಲಕ್ಷ್ಮಿ, ರೊನಾಲ್ಡ್ ರೂಕ್‌ರ ಹೇಳಿಕೆಯೊಂದನ್ನು ಪೋಸ್ಟ್ ಮಾಡಿ, “ನನ್ನ ಜೀವನಕ್ಕೆ ದಿನಗಳನ್ನು ಸೇರಿಸಲು ನಾನು ಓಡುವುದಿಲ್ಲ, ನನ್ನ ದಿನಗಳಿಗೆ ಜೀವ ತುಂಬಲು ಓಡುತ್ತೇನೆ,” ಎಂದು ಹೇಳಿದ್ದರು.
ಇದೇ ಪೋಸ್ಟ್‌ಗೆ ತಮ್ಮದೇ ಎಂಡಿಂಗ್ ಕೊಟ್ಟಿದ್ದ ರಾಜಲಕ್ಷ್ಮಿ, “ನಾನು ನನ್ನ ದಿನಗಳಿಗೆ ಜೀವ ಸೇರಿಸಿದ್ದೇನೆ, ನನ್ನ ಜೀವನಕ್ಕೆ ಸ್ನೇಹಿತರನ್ನು ಸೇರಿಸಿದ್ದೇನೆ. ನನ್ನ ಕೆಲಸಕ್ಕೆ ಬೂಸ್ಟರ್ ಶಾಟ್ ಸೇರಿಸಿದ್ದೇನೆ. ನಾನು ಮತ್ತೊಂದು ದಿನ ಎದ್ದು ಬಂದಿದ್ದೇನೆ, ಓಡಲು, ಜೀವನವನ್ನು ಜೀವಿಸಲು,” ಎಂದು ಹೇಳಿಕೊಂಡಿದ್ದಾರೆ.
ನತದೃಷ್ಟ ಸಾವು ಕಂಡ ಬಳಿಕ ರಾಜಲಕ್ಷ್ಮಿರ ಈ ಪದಗಳಿಗೆ ಇನ್ನಷ್ಟು ಜೀವಂತಿಕೆ ಬಂದಿದ್ದು, ಈ ಪೋಸ್ಟ್ ನೋಡಿದ ಪ್ರತಿಯೊಬ್ಬರೂ ಭಾವುಕರಾಗಿದ್ದಾರೆ. ಅವರ ಲಿಂಕ್ಡಿನ್ ಪ್ರೊಫೈಲ್ ಚಿತ್ರ ಸಹ ಅವರ ರನ್ನಿಂಗ್ ವೇಳೆಯಲ್ಲಿ ತೆಗೆದಿದ್ದಾಗಿದೆ.
https://twitter.com/beastoftraal/status/1637642805819604992?ref_src=twsrc%5Etfw%7Ctwcamp%5Etweetembed%7Ctwterm%5E1637642805819604992%7Ctwgr%5E056c5de0b41cc6bb6922df3c4c366fff8d78526b%7Ctwcon%5Es1_&ref_url=https%3A%2F%2Fwww.news18.com%2Fbuzz%2Fto-run-to-live-mumbai-tech-ceos-old-post-goes-viral-after-her-death-during-morning-jog-7353697.html
https://twitter.com/eknazaridharbhi/status/1637721357554446336?ref_src=twsrc%5Etfw%7Ctwcamp%5Etweetembed%7Ctwterm%5E1637721357554446336%7Ctwgr%5E056c5de0b41cc6bb6922df3c4c366fff8d78526b%7Ctwcon%5Es1_&ref_url=https%3A%2F%2Fwww.news18.com%2Fbuzz%2Fto-run-to-live-mumbai-tech-ceos-old-post-goes-viral-after-her-death-during-morning-jog-7353697.html
https://twitter.com/beastoftraal/status/1637642805819604992?ref_src=twsrc%5Etfw%7Ctwcamp%5Etweetembed%7Ctwterm%5E1637655967373438978%7Ctwgr%5E056c5de0b41cc6bb6922df3c4c366fff8d78526b%7Ctwcon%5Es2_&ref_url=https%3A%2F%2Fwww.news18.com%2Fbuzz%2Fto-run-to-live-mumbai-tech-ceos-old-post-goes-viral-after-her-death-during-morning-jog-7353697.html