ಮೂವತ್ತು ವರ್ಷ ದಾಟಿತು ಅಂದಕೂಡಲೇ ದೇಹ ದುರ್ಬಲವಾಗುತ್ತಾ ಬರುತ್ತದೆ. ಹೀಗಾಗಿ ಮೂವತ್ತರ ಬಳಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಕಿತ್ತಳೆ, ದ್ರಾಕ್ಷಿ ಹಾಗೂ ಲಿಂಬುವನ್ನು ಸೇವಿಸಬೇಕು. ಸಿಟ್ರಸ್ ಹೆಚ್ಚಿರುವ ಹಣ್ಣುಗಳಲ್ಲಿ ಆ್ಯಂಟಿ ಆಕ್ಸಿಡಂಟ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂತಹ ಹಣ್ಣುಗಳನ್ನು ಸೇವಿಸಿದ ಬಳಿಕ ತೂಕ ಇಳಿಕೆಯಾಗುತ್ತದೆ ಹಾಗೂ ಹೃದಯಾಘಾತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಬೊಕ್ರೊಲಿಯಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ ಇರುತ್ತದೆ. ಇದು ನಿಮ್ಮ ದೇಹದ ಮೂಳೆಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ರೋಗದ ವಿರುದ್ಧ ಹೋರಾಡಲು ಅನುಕೂಲಕಾರಿ.




ಆಂಟಿಸೆಪ್ಟಿಕ್, ಆಂಟಿಆಕ್ಸಿಡಂಟ್ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಈ ಜೇನುತುಪ್ಪದಲ್ಲಿದೆ. ಅನೇಕರು ಸೌಂದರ್ಯವರ್ಧಕವಾಗಿ ಬಳಕೆ ಮಾಡುತ್ತಾರೆ.
ಚಿಯಾ ಬೀಜಗಳು ಅಗಾಧ ಪ್ರಮಾಣದಲ್ಲಿ ಫೈಬರ್, ಒಮೆಗಾ 3 ಫ್ಯಾಟಿ ಆ್ಯಸಿಡ್ ಹಾಗೂ ಮ್ಯಾಗ್ನೆಷಿಯಂ ಇದೆ. ಚಿಯಾ ಬೀಜಗಳನ್ನು ಸೇವನೆ ಮಾಡುವುದರಿಂದ ನಿಮಗೆ ಹೊಟ್ಟೆ ತುಂಬಿದಂತೆ ಎನಿಸಲಿದೆ. ಹಾಗೂ ಕೇಶವರ್ಧನೆಗೂ ಸಹಕಾರಿ.


