BREAKING: ಸತತ 7 ಗಂಟೆ ವಿಚಾರಣೆ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಟಿಎಂಸಿ ನಾಯಕ ಅರೆಸ್ಟ್

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಟಿಎಂಸಿ ನಾಯಕ ಶಾಂತನು ಬ್ಯಾನರ್ಜಿ ಅವರನ್ನು ಬಂಧಿಸಿದ್ದಾರೆ.

ಸತತ 7 ಗಂಟೆಗಳ ವಿಚಾರಣೆಯ ನಂತರ ಇಡಿ ಅಧಿಕಾರಿಗಳು ಶಾಂತನು ಅವರನ್ನು ಬಂಧಿಸಿದ್ದಾರೆ. 7 ಗಂಟೆಗಳ ನಿರಂತರ ವಿಚಾರಣೆಯ ವೇಳೆ ಶಾಂತನು ಅವರ ಹೇಳಿಕೆಯಲ್ಲಿ ಹಲವಾರು ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಇಡಿ ಯ ಕೋಲ್ಕತ್ತಾ ಕಚೇರಿಯು ಶಾಂತನು ಬಂಧನದ ಬಗ್ಗೆ ದೆಹಲಿಯ ಪ್ರಧಾನ ಕಚೇರಿ ಸಂಪರ್ಕಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಮೂಲಗಳ ಪ್ರಕಾರ, ಶಾಂತನು ಅವರ ಮನೆಯಲ್ಲಿ 300 ಶಿಕ್ಷಕರ ಅಭ್ಯರ್ಥಿಗಳ ಪಟ್ಟಿ ಪತ್ತೆಯಾಗಿದ್ದು, ಈ ಸಂಬಂಧ ಅವರನ್ನು ಪ್ರಶ್ನಿಸಲಾಗಿದೆ. ಶಾತನು ಹಣದ ವಹಿವಾಟು ನಡೆಸಿದ ಮಾಹಿತಿ ಬಗ್ಗೆಯೂ ಕೇಳಲಾಗಿದೆ,

ಬಲಗಢ್‌ನ ಮತ್ತೊಬ್ಬ ತೃಣಮೂಲ ಯುವ ನಾಯಕ ಕುಂತಲ್ ಘೋಷ್ ಬಂಧನದ ನಂತರ ಶಾಂತನು ಬಂಧನವಾಗಿದೆ. ಕುಂತಲ್ ಮತ್ತು ಶಾಂತನು 2014 ರಿಂದ ನೇಮಕಾತಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read