HomeIndiaತಿರುಪತಿಯಲ್ಲಿ ಭಕ್ತರ ಪಾದರಕ್ಷೆ ಸುರಕ್ಷತೆಗಾಗಿ TTDಯಿಂದ QR-ಆಧಾರಿತ ಸ್ಮಾರ್ಟ್ ವ್ಯವಸ್ಥೆ ಜಾರಿ

ತಿರುಪತಿಯಲ್ಲಿ ಭಕ್ತರ ಪಾದರಕ್ಷೆ ಸುರಕ್ಷತೆಗಾಗಿ TTDಯಿಂದ QR-ಆಧಾರಿತ ಸ್ಮಾರ್ಟ್ ವ್ಯವಸ್ಥೆ ಜಾರಿ

ತಿರುಪತಿ: ತಿರುಪತಿ-ತಿರುಮಲದಲ್ಲಿ ಭಕ್ತರ ಪಾದರಕ್ಷೆ ಸುರಕ್ಷತೆಗಾಗಿ ಟಿಟಿಡಿ QR-ಆಧಾರಿತ ಸ್ಮಾರ್ಟ್ ವ್ಯವಸ್ಥೆ ಜಾರಿಗೆ ತಂದಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಪ್ರತಿ ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗೆ ಬರುವ ಭಕ್ತರ ಪಾದರಕ್ಷೆ ಸುರಕ್ಷತೆ ನಿಟ್ಟಿನಲ್ಲಿ ಟಿಟಿಡಿ ಹೊಸ ವ್ಯವಸ್ಥೆ ಆರಂಭಿಸಿದ್ದು, QR-ಆಧಾರಿತ ಸ್ಮಾರ್ಟ್ ವ್ಯವಸ್ಥೆ ಜಾರಿಗೆ ತಂದಿದೆ. ಈಗಾಗಲೇ 8,45,816 ಭಕ್ತರು ಈ ವ್ಯವಸ್ಥೆಯ ಸೌಲಭ್ಯವನ್ನು ಬಳಸಿದ್ದಾರೆ. ಇದರ ಪರಿಣಾಮವಾಗಿ ತಿರುಮಲದಲ್ಲಿ ಸ್ವಚ್ಛತೆ ಹೆಚ್ಚಿರುವುದಲ್ಲದೆ, ಪಾದರಕ್ಷೆ ಕಾಣೆಯಾಗುವ ಪ್ರಕರಣಗಳೂ ಕಡಿಮೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಕೆಲವು ಭಕ್ತರು ತಂತ್ರಜ್ಞಾನದ ಅರಿವಿನ ಕೊರತೆಯಿಂದಾಗಿ ಈ ವ್ಯವಸ್ಥೆಯನ್ನು ಇನ್ನೂ ಬಳಸುತ್ತಿಲ್ಲ. ಹಾಗಾಗಿ ಟಿಟಿಡಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರಚಾರ ಕಾರ್ಯಗಳನ್ನು ಆರಂಭಿಸಿದೆ.

ಭಕ್ತರಿಗೆ ಯಾವುದೇ ಅನಾನುಕೂಲತೆಯಾಗದಂತೆ ಟಿಟಿಡಿ ಹಲವು ಹೊಸ ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಭಕ್ತರ ಪಾದರಕ್ಷೆಗಳ ಸುರಕ್ಷಿತೆಗೆ ತಂತ್ರಜ್ಞಾನ ಆಧಾರಿತ ಪರಿಹಾರ ಒದಗಿಸಿದೆ. ತಿರುಮಲಕ್ಕೆ ಬರುವ ಭಕ್ತರಲ್ಲಿ ಅನೇಕರು ತಮ್ಮ ಪಾದರಕ್ಷೆಗಳನ್ನು ಎಲ್ಲಿ ಸುರಕ್ಷಿತವಾಗಿ ಇಡಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಕೆಲವರು ಅವನ್ನು ರಸ್ತೆಯ ಬದಿಯಲ್ಲಿ ಅಥವಾ ಬೇರೆಲ್ಲೋ ಬಿಡುವುದರಿಂದ ಅವು ಕಾಣೆಯಾಗುವ ಸಾಅಧ್ಯತೆ ಹೆಚ್ಚು. ಪಾದರಕ್ಷೆ ಸಂಗ್ರಹಿಸಲು ವಿಶೇಷ ಕೌಂಟರ್‌ಗಳು ಇದ್ದರೂ, ಅಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ಠೇವಣಿ ಇಡಲು ಮತ್ತು ಮರಳಿ ಪಡೆಯಲು ಸಮಯ ಹಿಡಿಯುತ್ತದೆ.

ಹಾಗಾಗಿ ಈ ಸಮಸ್ಯೆಗೆ ಪರಿಹಾರವಾಗಿ ಟಿಟಿಡಿ QR-ಆಧಾರಿತ ಸ್ಮಾರ್ಟ್ ಪಾದರಕ್ಷೆ ಟ್ರ್ಯಾಕಿಂಗ್ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯಡಿ ಭಕ್ತರು ತಮ್ಮ ಪಾದರಕ್ಷೆಗಳನ್ನು ಕೌಂಟರ್‌ನಲ್ಲಿ ನೀಡಿದಾಗ QR ಕೋಡ್ ರಸೀದಿ ಪಡೆಯುತ್ತಾರೆ. ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪಾದರಕ್ಷೆಗಳನ್ನು ವೇಗವಾಗಿ ಮತ್ತು ಸುಲಭವಾಗಿ ಮರಳಿ ಪಡೆಯಬಹುದು. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ, ಭಕ್ತರಿಗೆ ಹೆಚ್ಚಿನ ಅನುಕೂಲವೂ ಆಗುತ್ತದೆ.

ಈ ವ್ಯವಸ್ಥೆಯನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾಯಿತಾದರೂ, ಪ್ರಸ್ತುತ ಕೆಲವು ಸ್ಥಳಗಳಲ್ಲಿ ಮಾತ್ರ ಸೌಲಭ್ಯ ಲಭ್ಯವಿದೆ. ಆದರೆ ಭಕ್ತರ ಹೆಚ್ಚಿನ ಓಡಾಟ ಇರುವ ಪ್ರದೇಶಗಳಲ್ಲಿ ಶೀಘ್ರದಲ್ಲೇ ಇನ್ನಷ್ಟು ಕೌಂಟರ್‌ಗಳನ್ನು ಸ್ಥಾಪಿಸಲು ಟಿಟಿಡಿ ಸಿದ್ಧತೆ ನಡೆಸಿದೆ.

ಕಲ್ಯಾಣಕಟ್ಟೆ, ಎಟಿಸಿ ವೃತ್ತ ಮತ್ತು ಬೇಡಿ ಆಂಜನೇಯಸ್ವಾಮಿ ದೇವಾಲಯದ ಬಳಿಯೂ ಈ ಸ್ಮಾರ್ಟ್ ಪಾದರಕ್ಷೆ ಕೌಂಟರ್‌ಗಳನ್ನು ಆರಂಭಿಸಲು ಯೋಜಿಸಲಾಗಿದೆ. ಈ ಯೋಜನೆ ಕೋರಮಾಂಡರ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular