2023ರಲ್ಲಿ ಈ ಆರು ದಿನಗಳಲ್ಲಿ ವಿಚಿತ್ರ ಸಂಭವಿಸುತ್ತದೆ ಎಂದು ಭವಿಷ್ಯ

ಜ್ಞಾನವು ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೂ ಪ್ರಕೃತಿಯ ಮುಂದೆ ವಿಜ್ಞಾನಿಗಳು ಹೇಳಿದ್ದೂ ನಡೆಯುವುದಿಲ್ಲ. ಇದರ ಹೊರತಾಗಿಯೂ ಕೆಲ ಜನರ ಭವಿಷ್ಯ ನುಡಿಗಳು ನಿಜವಾಗುತ್ತವೆ, ಕೆಲವರ ಭವಿಷ್ಯವಾಣಿಗಳು ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತವೆ.
ಈಗ ಎನೋ ಅಲಾರಿಕ್ ಎಂಬ ಹೆಸರಿನ ಈ ವ್ಯಕ್ತಿಯು ತನ್ನನ್ನು ತಾನು ಟೈಮ್ ಟ್ರಾವೆಲರ್ ಎಂದು ಕರೆದುಕೊಂಡಿದ್ದು, 2023 ಹಲವು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. @theradianttimetraveller ಎಂಬ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಾಗಿರುವ ಎನೋ, ಆನ್‌ಲೈನ್‌ನಲ್ಲಿ ಜನರಿಗೆ ಭವಿಷ್ಯದ ಬಗ್ಗೆ ಮಾಹಿತಿ ನೀಡುತ್ತಾರೆ.

ಅವರ ಭವಿಷ್ಯವನ್ನು ಇದುವರೆಗೆ 26,000 ಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ಅನೇಕ ಜನರು ಗಂಭೀರವಾಗಿ ಪರಿಗಣಿಸುತ್ತಿರುವ ಅವರ ಭವಿಷ್ಯವಾಣಿಗಳ ಪಟ್ಟಿಯನ್ನು ಎನೋ ಹಂಚಿಕೊಂಡಿದ್ದಾರೆ.

2023ರಲ್ಲಿ ಏಲಿಯನ್ ಗಳು ಭೂಮಿಗೆ ಬರಲಿವೆ ಎಂದು ಎನೋ ಹಂಚಿಕೊಂಡಿದ್ದಾರೆ. ಭೂಮಿಯನ್ನು ಹೋಲುವ ಮತ್ತೊಂದು ಗ್ರಹವನ್ನು ಸಹ ಜಗತ್ತು ಪತ್ತೆ ಮಾಡುತ್ತದೆ ಎಂದಿದ್ದಾರೆ.

ಇದರ ಹೊರತಾಗಿ ಕೆಲವೊಂದು ಪ್ರಮುಖ ದಿನಗಳ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಅವುಗಳ ವಿವರ ಹೀಗಿದೆ:

ಮಾರ್ಚ್ 23: ಭೂಮಿಯನ್ನು ಉಳಿಸಲು ಎಂಟು ಸಾವಿರ ಜನರನ್ನು ವಿದೇಶಿಯರು ಆಯ್ಕೆ ಮಾಡುತ್ತಾರೆ

ಮೇ 15: 750 ಅಡಿ ಎತ್ತರದ ಸುನಾಮಿ ಸ್ಯಾನ್ ಫ್ರಾನ್ಸಿಸ್ಕೋಗೆ ಅಪ್ಪಳಿಸುತ್ತದೆ. ಎರಡು ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಾರೆ.

ಜೂನ್ 18: ಏಳು ಜನರು ಒಂದೇ ಬಾರಿಗೆ ಆಕಾಶದಿಂದ ಬೀಳುತ್ತಾರೆ.

ಆಗಸ್ಟ್ 18: ವಿಜ್ಞಾನಿಗಳು ಚರ್ಮದ ಕ್ಯಾನ್ಸರ್​ಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ

ಡಿಸೆಂಬರ್ 3: ಅನೇಕ ರೋಗಗಳನ್ನು ಗುಣಪಡಿಸುವ ಹರಳು ಪತ್ತೆಯಾಗುತ್ತದೆ.

ಡಿಸೆಂಬರ್ 29: ಕಾಂಡಕೋಶಗಳ ಮೂಲಕ ಹೊಸ ಅಂಗಗಳು ಬೆಳೆಯಲು ಪ್ರಾರಂಭಿಸುತ್ತವೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read