ಇಸ್ಲಾಮಾಬಾದ್ ಬಳಿಯ ತಕ್ಷಶಿಲಾ (ತಕ್ಷಿಲಾ) ನಗರದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಖ್ಯಾತ ಟಿಕ್‌ಟಾಕ್ ಪ್ರಭಾವಿ ಶಂಸು ಬೀಬಿ ಅಲಿಯಾಸ್ ಆಯಿಷಾ ಗಿಲಮಾನಿ ದುರಂತವಾಗಿ ಹತ್ಯೆಯಾಗಿದ್ದಾರೆ. ಇಪ್ಪತ್ತೆಂಟರ ಹರೆಯದ ಆಯಿಷಾ ಅವರನ್ನು ಅವರ ಮನೆಯಿಂದ ಆಚೆಗೆ ಕರೆಸಿ ಈ ಹತ್ಯೆ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 14ರಂದು ಈ ಘಟನೆ ನಡೆದಿದ್ದು, ಆಯಿಷಾ ಅವರ ತಂದೆ ಫಜಲ್ ಸಾಹಿಬ್ಜಾದಾ ಅವರು ನೀಡಿರುವ ದೂರಿನ ಪ್ರಕಾರ, ಕಾಶಿ ಎಂಬ ವ್ಯಕ್ತಿಯಿಂದ ಕರೆ ಬಂದ ತಕ್ಷಣ ಆಯಿಷಾ ತಮ್ಮ ಕಿರಿಯ ತಂಗಿ ಅಸೀಮಾ ಮತ್ತು ಸಹೋದರ ನೈಮತುಲ್ಲಾ ಅವರೊಂದಿಗೆ ಕಾರಿನಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಪೆಟ್ರೋಲ್ ಬಂಕ್ ಒಂದರ ಬಳಿ ಬೈಕಿನಲ್ಲಿ ಬಂದ ಮೂವತ್ತರಿಂದ ಮೂವತ್ತೈದು ವರ್ಷ ಪ್ರಾಯದ ಇಬ್ಬರು ಅಪರಿಚಿತರು ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡು ಆಯಿಷಾ ಅವರ ಕುತ್ತಿಗೆಯ ಭಾಗಕ್ಕೆ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ದಾಳಿಯ ರಭಸಕ್ಕೆ ಕಾರಿನ ಚಾಲಕ ನಿಯಂತ್ರಣ ತಪ್ಪಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಕಾರಿನಲ್ಲಿದ್ದ ಹದಿನೈದರ ಹರೆಯದ ಅಸೀಮಾ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹತ್ಯೆ ನಡೆಸಿ ದುಷ್ಕರ್ಮಿಗಳು ಬೈಕಿನಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆಯಿಷಾ ಅವರಿಗೆ ಕೌಸರ್ ಮತ್ತು ಜಾವೇದ್ ಎಂಬುವರೊಂದಿಗೆ ಹಣಕಾಸಿನ ವಿವಾದಗಳಿದ್ದವು ಹಾಗೂ ಅವರಿಂದ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿಂದೆ ಈ ಕುರಿತು ಇಸ್ಲಾಮಾಬಾದ್ ಪೊಲೀಸರಿಗೂ ದೂರು ನೀಡಲಾಗಿತ್ತು.
ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತರ ಕುಟುಂಬ ಆಗ್ರಹಿಸಿದೆ. 13 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದ ಜನಪ್ರಿಯ ಸಾಮಾಜಿಕ ಜಾಲತಾಣ ತಾರೆಯ ಈ ದುರಂತ ಅಂತ್ಯ ಆಕೆಯ ಅಭಿಮಾನಿಗಳಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.
Gillamana Ayesha CCTV Footage TikToker
Gillamana Ayesha #gillamana #trend #trending #tiktok 🙃 pic.twitter.com/nb3cx1W9Uq— 🇲🇹Lewane😎 (@LewaneSays) August 15, 2026
CCTV footage shows the incident in which famous TikToker Ayesha Gilmena and her driver were killed.
The female TikToker was shot dead by unidentified assailants in Taxila. Police have launched an investigation, while sources say the attackers’ identities and motives remain… pic.twitter.com/uIbvLpGQX5
— Photo News (@PhotoNewsPk) August 15, 2026
Ayesha Gilamana was a Pakistani TikToker with 1.3 million followers. Her story highlights how online popularity can be very different from the connections we build in everyday life.#SocialMedia #Awareness pic.twitter.com/evc75xfeEq
— Larkiyo Ki Baatein (@LarkyoKiBateinn) August 16, 2026

