ಬೆಂಗಳೂರು: ಬೆಂಗಳೂರಿನ ಎಂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿ.- ಎಸ್.ಆರ್.ಹೆಚ್. ಪಂದ್ಯದ ವೇಳೆ ಮೊಬೈಲ್ ಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 18 ಲಕ್ಷ ರೂಪಾಯಿ ಮೌಲ್ಯದ 28 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಮಾ. 28ರಂದು ಶನಿವಾರ ಆರ್.ಸಿ.ಬಿ. ಮತ್ತು ಎಸ್.ಆರ್.ಹೆಚ್. ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಈ ವೇಳೆ ಅಭಿಮಾನಿಗಳ ಮೊಬೈಲ್ ಕಳವು ಮಾಡಲಾಗಿತ್ತು. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು 12 ಎಫ್ಐಆರ್ ದಾಖಲಿಸಿಕೊಂಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಎರಡು ದಿನದಲ್ಲಿ 18 ಲಕ್ಷ ರೂಪಾಯಿ ಮೌಲ್ಯದ 21 ಮೊಬೈಲ್ ಗಳನ್ನು ಪತ್ತೆ ಮಾಡಿದ್ದಾರೆ. ಮೊಬೈಲ್ ಕಳವು ಮಾಡಿದ್ದ ಓರ್ವ ಆರೋಪಿ ಮತ್ತು ಮೂವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಐಪಿಎಲ್ ಪಂದ್ಯ ಮತ್ತು ಜನಜಂಗುಳಿ ಸೇರುವ ಜಾಗಗಳನ್ನು ಟಾರ್ಗೆಟ್ ಮಾಡಿ ಅಪ್ರಾಪ್ತರನ್ನು ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

