ಮದುವೆಗೆ ದೊಡ್ಡವರ ಒಪ್ಪಿಗೆ ಇದ್ರೂ ಓಡಿಹೋಗಿ ಮದುವೆ ಆಗ್ತೇನೆ ಅನ್ನೋದ್ಯಾಕೆ ಈಕೆ…..?

ಮನೆಯವರ ಒಪ್ಪಿಗೆ ಸಿಕ್ಕಿದ್ಮೇಲೆ ಪ್ರೇಮಿಗಳು ಎಲ್ಲರ ಸಮ್ಮುಖದಲ್ಲಿ ಮದುವೆ ಆಗ್ತಾರೆ. ಆದ್ರೆ ಈ ಜೋಡಿ ಸ್ವಲ್ಪ ಭಿನ್ನವಾಗಿದೆ. ಮನೆಯವರ ಒಪ್ಪಿಗೆ ಸಿಕ್ಕಿದ್ಮೇಲೂ ಓಡಿ ಹೋಗಿ ಮದುವೆ ಆಗುವ ಆಲೋಚನೆ ಮಾಡ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಮಹಿಳೆ ರೆಡ್ಡಿಟ್‌ ನಲ್ಲಿ ಹೇಳಿದ್ದಾಳೆ.

ಆಕೆ ಪೋಸ್ಟ್‌ ಪ್ರಕಾರ, ಆಕೆಗೆ 35 ವರ್ಷ ಮತ್ತು ಆಕೆ ಮದುವೆಯಾಗಲಿರುವ ವ್ಯಕ್ತಿಗೆ 30 ವರ್ಷ. ಇವರಿಬ್ಬರ ಮಧ್ಯೆ ಅತ್ತೆ ಖಳನಾಯಕಿ. ಮನೆಯವರೆಲ್ಲ ಒಪ್ಪಿದ್ದರೂ ವರನ ಅಮ್ಮನಿಗೆ ಮದುವೆ ಇಷ್ಟವಿಲ್ಲ. ಇವರಿಬ್ಬರು ಒಟ್ಟಿಗೆ ಇರುವಾಗ ಪದೇ ಪದೇ ಫೋನ್‌ ಮಾಡಿ ತೊಂದರೆ ನೀಡುವ ತಾಯಿ, ಮಗನ ಮುಂದೆ ನನಗೆ ಈ ಮದುವೆ ಇಷ್ಟವಿಲ್ಲ ಎಂಬುದನ್ನೂ ಹೇಳಿದ್ದಾಳೆ.

ರೆಡ್ಡಿಟ್‌ ನಲ್ಲಿ ಪೋಸ್ಟ್‌ ಹಂಚಿಕೊಂಡ ಮಹಿಳೆಗೆ ಇದು ಎರಡನೇ ಮದುವೆ. ಆಕೆಗೆ ಒಬ್ಬ ಮಗನಿದ್ದಾನೆ. ವರನ ಅಣ್ಣನ ಮದುವೆ ಸಮಯದಲ್ಲಿ ಹಾಗೂ ಕ್ರಿಸ್‌ ಮಸ್‌ ಹಬ್ಬದ ಸಮಯದಲ್ಲಿ ಮಹಿಳೆ ತನ್ನ ಮಗನನ್ನು ಕರೆತಂದಿಲ್ಲ ಎನ್ನುವ ಕಾರಣಕ್ಕೆ ಭಾವಿ ಅತ್ತೆ ರಾದ್ದಾಂತ ಮಾಡಿದ್ದಳಂತೆ. ಮದುವೆಯಾಗಲು ಸಿದ್ಧನಿರುವ ತನ್ನ ಮಗನ ಬಗ್ಗೆಯೂ ಎಲ್ಲ ವಿಷ್ಯ ತಿಳಿದಿರಬೇಕು ಎನ್ನುವ ಅತ್ತೆ, ಒಂದಲ್ಲ ಒಂದು ವಿಷ್ಯಕ್ಕೆ ಗಲಾಟೆ ಮಾಡ್ತಾಳೆ. ಆಕೆಯ ಕಿರಿಕಿರಿಗೆ ಬೇಸತ್ತ ಈ ಜೋಡಿ, ಓಡಿ ಹೋಗಿ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ರೆಡ್ಡಿಟ್‌ ನಲ್ಲಿ ಈ ಪೋಸ್ಟ್‌ ಗೆ ಸಾಕಷ್ಟು ಕಮೆಂಟ್‌ ಬಂದಿದೆ. ಅನೇಕರು ಓಡಿ ಹೋಗಿ ಮದುವೆ ಆಗೋದು ಸರಿ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read