ಸಾಮಾನ್ಯವಾಗಿ ಆನ್ಲೈನ್‌ನಲ್ಲಿ ವೈರಲ್ ವಿಡಿಯೋಗಳನ್ನು ಕಂಡಂತೆ ಆನೆಗಳು ಸೌಮ್ಯ ಜೀವಿಗಳು ಎಂಬ ಭಾವನೆ ಮೂಡುತ್ತದೆ. ಆನೆಗಳು ವಾಹನಗಳ ಮೇಲೆ ದಾಳಿ ಮಾಡುವ ಕ್ಲಿಪ್‌ಗಳು ಬಹಳಷ್ಟು ಬಂದಿದ್ದರೂ ಸಹ, ಕೆಲವೊಮ್ಮೆ ಅವುಗಳ ಸಿಟ್ಟಿಗೆ ಕಾರಣಗಳಿರುತ್ತವೆ.
ಆದರೆ ಎರಡು ಆನೆಗಳು ಕಾಳಗದಲ್ಲಿ ಭಾಗಿಯಾಗಿರುವ ವಿಡಿಯೋ ನೋಡಿದ್ದೀರಾ? ದಿ ಫೀಗೆನ್ ಎಂಬ ನೆಟ್ಟಿಗ ಶೇರ್ ಮಾಡಿರುವ ವಿಡಿಯೋವೊಂದರಲ್ಲಿ ಎರಡು ಮದಗಜಗಳ ಕಾದಾಟ ನೋಡಬಹುದಾಗಿದೆ.
ಎರಡೂ ಆನೆಗಳು ತಂತಮ್ಮ ಮುಂಗಾಲುಗಳನ್ನು ಎತ್ತಿಕೊಂಡು ಕಚ್ಚಾಡುತ್ತಿವೆ. “ಈ ಆನೆಗಳ ಸಮಸ್ಯೆ ಏನು?” ಎಂದು ಕ್ಯಾಪ್ಷನ್ ಹಾಕಿ ವಿಡಿಯೋ ಪೋಸ್ಟ್ ಮಾಡಲಾಗಿದೆ.
“ಯಾವುದೋ ಹೆಣ್ಣಿನ ವಿಷಯಕ್ಕೆ ಇರಬೇಕು. ಜಗಳ ಯಾವಾಗಲೂ ಹೆಣ್ಣಿನ ಮೇಲೆಯೇ ಇರುತ್ತದೆ,” ಎಂದು ಟ್ವಿಟರ್ ಬಳಕೆದಾರರೊಬ್ಬರು ಜೋಕ್ ಮಾಡಿದ್ದಾರೆ.
“ಉದ್ದನೆಯ ದಂತಗಳಿರುವ ಆನೆ ಹಿರಿಯ ಆನೆಯಾಗಿದ್ದು, ಕಿರಿಯ ಆನೆ ಜಾಗದ ಮೇಲಿನ ಹಿಡಿತಕ್ಕಾಗಿ ಕಾದಾಡುತ್ತಿದೆ,” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
https://twitter.com/TheFigen_/status/1642906615375355905?ref_src=twsrc%5Etfw%7Ctwcamp%5Etweetembed%7Ctwterm%5E1642906615375355905%7Ctwgr%5E9ab38448ca585d8dd3391e90ac0d66012d21da7a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-viral-video-of-two-elephants-fighting-fiercely-will-make-your-jaw-drop-watch-2355715-2023-04-04
https://twitter.com/bhargav_mitra/status/1642957933259661313?ref_src=twsrc%5Etfw%7Ctwcamp%5Etweetembed%7Ctwterm%5E1642957933259661313%7Ctwgr%5E9ab38448ca585d8dd3391e90ac0d66012d21da7a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-viral-video-of-two-elephants-fighting-fiercely-will-make-your-jaw-drop-watch-2355715-2023-04-04
https://twitter.com/tmon61/status/1642916593075093504?ref_src=twsrc%5Etfw%7Ctwcamp%5Etweetembed%7Ctwterm%5E1642916593075093504%7Ctwgr%5E9ab38448ca585d8dd3391e90ac0d66012d21da7a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-viral-video-of-two-elephants-fighting-fiercely-will-make-your-jaw-drop-watch-2355715-2023-04-04