HomeLatest Newsಸಖತ್‌ ಇಂಟ್ರಸ್ಟಿಂಗ್‌ ಆಗಿದೆ ʼಶಟಲ್ ಕಾಕ್‌ʼ ತಯಾರಿಸುವ ವಿಡಿಯೋ

ಸಖತ್‌ ಇಂಟ್ರಸ್ಟಿಂಗ್‌ ಆಗಿದೆ ʼಶಟಲ್ ಕಾಕ್‌ʼ ತಯಾರಿಸುವ ವಿಡಿಯೋ

ಶಟಲ್ ಕಾಕ್‌ಗಳನ್ನು ತಯಾರಿಸುವಾಗ ಎಷ್ಟೊಂದು ಶ್ರದ್ಧೆ ವಹಿಸಿ ಕೆಲಸ ಮಾಡಲಾಗುತ್ತದೆ ಎಂಬ ಕುತೂಹಲದ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ತಯಾರಿಸುವ ಸಂಕೀರ್ಣವಾದ ಕರಕುಶಲತೆಯನ್ನು ವಿಡಿಯೋ ಎತ್ತಿ ತೋರಿಸುತ್ತದೆ.

ವ್ಯಕ್ತಿಯೊಬ್ಬ ಶಟಲ್ ಕಾಕ್ ಅನ್ನು ಕರಕುಶಲವಾಗಿ ತಯಾರಿಸುವುದು ಮತ್ತು ಸ್ವಯಂ-ತಿರುಗಿಸುವ ಯಂತ್ರದಲ್ಲಿ ಪರೀಕ್ಷೆಗಳನ್ನು ನಡೆಸುವುದನ್ನು ವೀಡಿಯೊ ಒಳಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಟಲ್ ಕಾಕ್ ಸರಿಯಾಗಿ ಕೆಲಸ ನಿರ್ವಹಿಸುವುದನ್ನು ಈ ಯಂತ್ರದಲ್ಲಿ ನೋಡಲಾಗುತ್ತದೆ. ಸ್ವಲ್ಪವೇ ಸಂದೇಹ ಬಂದರೂ ಅದರ ಗರಿಗಳನ್ನು ಕಿತ್ತು ಮತ್ತೊಂದು ಕಡೆ ಇಟ್ಟು ಪುನಃ ಯಂತ್ರದಲ್ಲಿ ತಿರುಗಿಸಿ ನೋಡಲಾಗುತ್ತದೆ. ಅದು ಸರಿಯಾಗಿದೆ ಎಂದು ಕಂಡುಕೊಳ್ಳುವವರೆಗೂ ಹೀಗೆ ಗರಿಗಳನ್ನು ಬದಲಾಯಿಸುತ್ತಲೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.

ಒಂದು ಶಟಲ್​ಕಾಲ್​ ತಯಾರಿಕೆಗೆ ಇಷ್ಟೊಂದು ಸಮಯ ಹಿಡಿಯುತ್ತದೆಯೇ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೊ ಈಗಾಗಲೇ ಐದು ಮಿಲಿಯನ್ ವೀಕ್ಷಣೆಗಳನ್ನು ಮತ್ತು 60 ಸಾವಿರ ಇಷ್ಟಗಳನ್ನು ಸಂಗ್ರಹಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular