ಮಾರುತಿ, ಮಹೀಂದ್ರದಂತಹ ಕಂಪನಿಗಳ ಕಾರುಗಳನ್ನೇ ಹಿಂದಿಕ್ಕಿದೆ ಈ ವಾಹನ; ಜೂನ್‌ ತಿಂಗಳಲ್ಲಿ ಭರ್ಜರಿ ಮಾರಾಟ….!

ಭಾರತದ ಕಾರು ಮಾರುಕಟ್ಟೆಯಲ್ಲಿ SUV ವಾಹನಗಳು ಪ್ರಾಬಲ್ಯ ಸಾಧಿಸುತ್ತಿವೆ. ಅರ್ಧಕ್ಕಿಂತ ಹೆಚ್ಚು SUV ಗಳೇ ಮಾರಾಟವಾಗ್ತಿವೆ. ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ SUVಗಳಿರುತ್ತವೆ. ಈ ಹಿಂದೆ ಮಾರುತಿ ಸುಜುಕಿಯ ಕೆಲವು ಹ್ಯಾಚ್‌ಬ್ಯಾಕ್ ಕಾರುಗಳಾದ ವ್ಯಾಗನ್ಆರ್, ಸ್ವಿಫ್ಟ್ ಹಾಗೂ ಬಲೆನೋ ಗ್ರಾಹಕರಿಗೆ ಮೋಡಿ ಮಾಡಿದ್ದವು.

ಆದರೆ ಈಗ ಇವುಗಳಿಗೆ ಎಸ್‌ಯುವಿಗಳಿಂದ ಕಠಿಣ ಸ್ಪರ್ಧೆ ಎದುರಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್‌ನ ಮೈಕ್ರೋ ಎಸ್‌ಯುವಿ ಪಂಚ್ ಭರ್ಜರಿ ಮಾರಾಟ ಕಂಡಿದೆ. ಜೂನ್‌ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ 10 ವಾಹನಗಳಲ್ಲಿ 5 SUVಗಳಾಗಿವೆ. ಉಳಿದವುಗಳ ಪೈಕಿ 3 ಹ್ಯಾಚ್‌ಬ್ಯಾಕ್‌ಗಳು, 1 ಸೆಡಾನ್ ಮತ್ತು 1 MPV ಸೇರಿದೆ. ಮಾರುತಿ ಸುಜುಕಿಯ ಪ್ರಾಬಲ್ಯ ಇನ್ನೂ ಉಳಿದುಕೊಂಡಿದೆ. ಟಾಟಾ ಮೋಟಾರ್ಸ್, ಹ್ಯುಂಡೈ ಮತ್ತು ಮಹೀಂದ್ರಾ ಕಂಪನಿಗಳು ಕೂಡ ಟಾಪ್ 10 ಪಟ್ಟಿಯಲ್ಲಿವೆ.

ಜೂನ್‌ನಲ್ಲಿ 18,238 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಪಂಚ್ ಮೊದಲ ಸ್ಥಾನದಲ್ಲಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕೂಡ ಈ ಕಾರು ಅತಿ ಹೆಚ್ಚು ಮಾರಾಟವಾಗಿತ್ತು. ಹೊಸ ಮಾರುತಿ ಸುಜುಕಿ ಸ್ವಿಫ್ಟ್ನ 16,422 ಯುನಿಟ್‌ಗಳು ಬಿಕರಿಉಆಗಿವೆ. ಹೊಸ ಹುಂಡೈ ಕ್ರೆಟಾದ 16,293 ಯುನಿಟ್‌ಗಳು ಮಾರಾಟವಾಗಿವೆ.

MPV ವಿಭಾಗದ ಲೀಡರ್ ಮಾರುತಿ ಸುಜುಕಿ ಎರ್ಟಿಗಾದ 15,902 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಬಲೆನೊದ 14,895 ಯುನಿಟ್‌ಗಳು ಸೇಲ್‌ ಆಗಿವೆ. ಮಾರುತಿ ಸುಜುಕಿ ವ್ಯಾಗನ್ಆರ್ನ 13,790 ಯುನಿಟ್‌ಗಳು ಮಾರಾಟವಾಗಿವೆ. ಜೂನ್‌ನಲ್ಲಿ ಮಾರುತಿ ಸುಜುಕಿ ಡಿಸಾಯರ್‌ನ 13,421 ಯುನಿಟ್‌ಗಳು, ಬ್ರೆಝಾದ 13,172 ಯುನಿಟ್‌ಗಳು, ಮಹೀಂದ್ರ ಸ್ಕಾರ್ಪಿಯೊದ 12,307 ಯುನಿಟ್‌ಗಳು ಮಾರಾಟವಾಗಿವೆ.

ಜೂನ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 10 ಕಾರುಗಳು

ಟಾಟಾ ಪಂಚ್ – 18,238

ಮಾರುತಿ ಸುಜುಕಿ ಸ್ವಿಫ್ಟ್ – 16,422

ಹುಂಡೈ ಕ್ರೆಟಾ – 16,293

ಮಾರುತಿ ಸುಜುಕಿ ಎರ್ಟಿಗಾ – 15,902

ಮಾರುತಿ ಸುಜುಕಿ ಬಲೆನೊ – 14,895

ಮಾರುತಿ ಸುಜುಕಿ ವ್ಯಾಗನಾರ್ – 13,790

ಮಾರುತಿ ಸುಜುಕಿ ಡಿಜೈರ್ – 13,421

ಮಾರುತಿ ಸುಜುಕಿ ಬ್ರೆಝಾ – 13,172

ಮಹೀಂದ್ರ ಸ್ಕಾರ್ಪಿಯೊ – 12,307

ಟಾಟಾ ನೆಕ್ಸಾನ್ – 12,066

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read