ಎರಡು ಬಾರಿ ಕೈ ಹಿಡಿದ ಅದೃಷ್ಟ: ರಾತ್ರೋ ರಾತ್ರಿ 1 ಮಿಲಿಯನ್ ಡಾಲರ್ ಗೆದ್ದ ಅಮೆರಿಕನ್

This US Man Led An Incredible Lottery Journey From $500 To $1 Million

ಅದೃಷ್ಟ ಒಮ್ಮೆ ಕೈ ಹಿಡಿದ್ರೆ ಸಾಕು, ರಾತ್ರೋ ರಾತ್ರಿ ಹಣೆಬರಹವೇ ಏಕ್​ದಂ ಬದಲಾಗಿರುತ್ತೆ. ಹಾಗಂತ ಅದು ಪ್ರತಿಯೊಬ್ಬರ ಕೈ ಹಿಡಿಯೋದಿಲ್ಲ. ಆದರೆ ಇತ್ತೀಚೆಗೆ ಅಮೆರಿಕಾದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಪದೇ ಪದೇ ಕೈ ಹಿಡಿದಿದೆ. ಅದೇ ವ್ಯಕ್ತಿ ಅಮೆರಿಕದ ಮಿಲೆನಿಯರ್​ಗಳಲ್ಲಿ ಒಬ್ಬನಾಗಿದ್ದಾನೆ.

ವಾಂಗ್​ಚಾ ಅನ್ನೊ ಹೆಸರಿನ ವ್ಯಕ್ತಿ ಮದ್ಯದ ಅಂಗಡಿಯಲ್ಲಿ ಸ್ಕ್ವಾಚ್- ಆ, ಅನ್ನೊ ಲಾಟರಿಯೊಂದನ್ನ ಖರೀದಿ ಮಾಡಿದ್ದಾನೆ. ಅದೇ ಲಾಟರಿಯಿಂದಾಗಿ ಆತ ಬರೋಬ್ಬರಿ 1ಮಿಲಿಯನ್ ಡಾಲರ್ ಬಹುಮಾನವನ್ನ ಗೆದ್ದಿದ್ದ.

ಅಸಲಿಗೆ ವಾಂಗ್​​ಚಾ ಕ್ಯಾಲಿಫೊರ್ನಿಯದಲ್ಲಿ 30 ಡಾಲರ್ ಖರ್ಚು ಮಾಡಿ ಲಾಟರಿಯೊಂದನ್ನ ಕೊಂಡುಕೊಂಡಿದ್ದರು. ಆ ಲಾಟರಿಯಿಂದಾಗಿ ಅವರು 500 ಡಾಲರ್ ಗೆದ್ದಿದ್ದರು. ಆ ಹಣದಿಂದ ಅವರು ಲಾಟರಿಯ ಸಂಪೂರ್ಣ ಪುಸ್ತಕವನ್ನೇ ಖರೀದಿ ಮಾಡುತ್ತಾರೆ. ಅದರಲ್ಲಿ ಅವರು ಒಂದೊಂದಾಗಿ ಲಾಟರಿಗಳನ್ನ ಸ್ಕ್ರ್ಯಾಚ್ (ಗೀಚುವುದು) ಮಾಡುತ್ತಾರೆ. ಸುಮಾರು 20 ಟಿಕೆಟ್ ಸ್ಕ್ರ್ಯಾಚ್ ಮಾಡಿರ್ತಾರೆ ಅಷ್ಟೆ. ಆಗಲೇ ಅದರೊಳಗಿದ್ದ ಒಂದು ಲಾಟರಿ ಇವರ ಕಿಸ್ಮತ್​ನ್ನೇ ಬದಲಾಯಿಸಿರುತ್ತೆ.

ಆ ಲಾಟರಿಗಳ ರಾಶಿಯಲ್ಲಿ ಒಂದು ಲಾಟರಿ ಬರೋಬ್ಬರಿ 1 ಮಿಲಿಯನ್ ಡಾಲರ್ ಗೆದ್ದಿರುತ್ತೆ. ವಾಂಗ್​ಚಾ ಈಗ ಮಿಲಿಯರ್ ಆಗಿದ್ದಾರೆ. ಲಾಟರಿಯಿಂದಾಗಿ ಆಗರ್ಭ ಶ್ರೀಮಂತರಾಗಿರುವ ಇವರ ಖುಷಿಗೆ ಈಗ ಪಾರವೇ ಇಲ್ಲದಂತಾಗಿದೆ. ಅದರಲ್ಲೂ ಅದೃಷ್ಟ ಒಂದಲ್ಲ ಎರಡು ಬಾರಿ ಒಲಿದು ಬಂದಿದ್ದರಿಂದ ಇವರ ಖುಷಿಗೆ ಈಗ ಪಾರವೇ ಇಲ್ಲದಂತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read