HomeInternationalನಿರುದ್ಯೋಗಿಗಳಿಗೆ ಉಚಿತ ಸೇವೆ ನೀಡುತ್ತದೆ ಈ ಡ್ರೈ ಕ್ಲೀನಿಂಗ್ ಶಾಪ್

ನಿರುದ್ಯೋಗಿಗಳಿಗೆ ಉಚಿತ ಸೇವೆ ನೀಡುತ್ತದೆ ಈ ಡ್ರೈ ಕ್ಲೀನಿಂಗ್ ಶಾಪ್

ಫಸ್ಟ್ ಇಂಪ್ರೆಶನ್ ಇಸ್ ದಿ ಬೆಸ್ಟ್ ಇಂಪ್ರೆಶನ್ ಎಂಬ ಮಾತುಗಳನ್ನು ನೀವು ಕೇಳಿರಬಹುದು. ಮೊದಲ ಉದ್ಯೋಗ ಸಂದರ್ಶನ, ಶಾಲಾ-ಕಾಲೇಜುಗಳ ಪ್ರವೇಶ ಮುಂತಾದ ಮೊತ್ತ ಮೊದಲನೇ ಭಾರಿ ಸಂಭವಿಸುವಂತಹ ಘಟನೆಗಳು ಸದಾ ನೆನಪಿನಲ್ಲಿರುತ್ತವೆ. ಇದೀಗ ಅನೇಕರು ಉದ್ಯೋಗಕ್ಕಾಗಿ ಹುಡುಕುತ್ತಿದ್ದಾರೆ. ಒಂದುವೇಳೆ ನಿಮಗೂ ಸಂದರ್ಶನದ ದಿನ ಹತ್ತಿರವಿದ್ದು, ನಿಮ್ಮ ಬಳಿ ನೀಟಾದ ಬಟ್ಟೆ ಇಲ್ಲ ಅಂತಾ ಚಿಂತಿಸುವ ಅಗತ್ಯವಿಲ್ಲ.

ಹೌದು, ಅಮೆರಿಕದ ಒಕ್ಲಹೋಮಾದಲ್ಲಿ ಡ್ರೈ ಕ್ಲೀನರ್ ಇದ್ದು, ಇದು ನಿರುದ್ಯೋಗಿಗಳಿಗೆ ಉಚಿತವಾಗಿದೆ. ಸಂದರ್ಶನಕ್ಕಾಗಿ ಬಟ್ಟೆಯನ್ನು ಇಲ್ಲಿ ಸ್ವಚ್ಛಗೊಳಿಸಬಹುದು. ಲಾಂಡ್ರಿ ಅಂಗಡಿಯ ಹೊರಗೆ ಟೇಪ್ ಮಾಡಲಾದ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸಂದರ್ಶನ ಹೊಂದಿರುವ ನಿರುದ್ಯೋಗಿಗಳಿಗೆ ಉಚಿತ ಕ್ಲೀನಿಂಗ್ ನೀಡುತ್ತಿದ್ದಾರೆ. ಪೋಸ್ಟರ್‌ನಲ್ಲಿ, ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಸಂದರ್ಶನಕ್ಕಾಗಿ ಬಟ್ಟೆಯನ್ನು ಸ್ವಚ್ಛಗೊಳಿಸಬೇಕಾದರೆ, ನಾವು ಅದನ್ನು ಉಚಿತವಾಗಿ ಸ್ವಚ್ಛಗೊಳಿಸುತ್ತೇವೆ ಎಂದು ಬರೆಯಲಾಗಿದೆ. ಮಾನವೀಯತೆಗಾಗಿ ಈ ರೀತಿ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಡ್ರೈ ಕ್ಲೀನರ್ ತೆಗೆದುಕೊಂಡ ಹೃದಯಸ್ಪರ್ಶಿ ಹೆಜ್ಜೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular