
ಜೋರ್ಡಾನ್ನ ರಾಷ್ಟ್ರೀಯ ಖಾದ್ಯವಾದ ಮನ್ಸಾಫ್ನ್ನು ಬಡಿಸಿದ ಬಳಿಕ ಹವಾನಿಯಂತ್ರಿತ ಕೋಣೆಗಳಲ್ಲಿ ನಿಮಗೆ ನಿದ್ರಿಸುವ ಅವಕಾಶ ಸಿಗಲಿದೆ. ರೆಸ್ಟಾರೆಂಟ್ನ ಸಹ ಮಾಲೀಕರಾಗಿರುವ ಓಮರ್ ಎಂಬೈದೀನ್ ಈ ಸೌಕರ್ಯವು ಮೊದಲು ತಮಾಷೆಯ ರೀತಿಯಲ್ಲಿ ನಮ್ಮ ರೆಸ್ಟಾರೆಂಟ್ನಲ್ಲಿ ಆರಂಭಗೊಂಡಿತ್ತು ಎಂದು ಹೇಳಿದ್ದಾರೆ. ಮನ್ಸಾಫ್ ತಯಾರಿಸಲು ಮೊಸರು, ತುಪ್ಪ, ಮಾಂಸಗಳನ್ನು ಬಳಕೆ ಮಾಡುತ್ತೇವೆ. ಇದನ್ನು ತಿಂದ ಬಳಿಕ ಹೆಚ್ಚಿನ ಜನರು ನಿದ್ದೆ ಮಾಡಲು ಇಚ್ಛಿಸುತ್ತಿದ್ದರು ಎಂದು ಹೇಳಿದ್ದಾರೆ.
ಹೀಗಾಗಿ ರೆಸ್ಟಾರೆಂಟ್ನಲ್ಲಿ ಗ್ರಾಹಕರಿಗೆ ಮಲಗಲು ಪ್ರತ್ಯೇಕ ಪ್ರದೇಶವನ್ನು ಮೀಸಲಿಡಲಾಗಿದ್ದು ಇಲ್ಲಿ ಒಬ್ಬರು ಆರಾಮದಾಯಕವಾಗಿ ನಿದ್ದೆ ಮಾಡಬಹುದಾಗಿದೆ. ಮನ್ಸಾಫ್ನ ಜೊತೆಯಲ್ಲಿ ಜೋರ್ಡಾನ್ನ ಈ ರೆಸ್ಟಾರೆಂಟ್ ಕಾಫಿಯನ್ನು ಸಹ ನೀಡುತ್ತಿದೆ. ಒಂದೊಳ್ಳೆ ಊಟ ಮಾಡಿದ ಬಳಿಕ ಚಿಕ್ಕ ನಿದ್ರೆ ಮಾಡಬೇಕು ಎನಿಸುತ್ತದೆಯೇ..? ಜೋರ್ಡಾನ್ನಲ್ಲಿರುವ ಈ ರೆಸ್ಟಾರೆಂಟ್ ನಿಮಗೆ ಇಲ್ಲಿನ ರಾಷ್ಟ್ರೀಯ ಖಾದ್ಯವನ್ನು ಆನಂದಿಸಲು ಅವಕಾಶ ನೀಡಿದ ಬಳಿಕ ಮಲಗೋಕೂ ವ್ಯವಸ್ಥೆ ಕಲ್ಪಿಸಿ ಕೊಡುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 48 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.
Have you ever needed to take a nap after a great meal 🤤? This restaurant in Jordan lets you enjoy the country’s national dish, mansaf, and afterward take a nap in its sleeping area. pic.twitter.com/Qdru4yFjFt
— NowThis Impact (@nowthisimpact) July 21, 2023

