HomeAstroರಾತ್ರಿ ಮಲಗುವಾಗ ಕಪ್ಪು ಬಟ್ಟೆ ಧರಿಸಿದ್ರೆ ಕಾಡುತ್ತೆ ಈ ಸಮಸ್ಯೆ

ರಾತ್ರಿ ಮಲಗುವಾಗ ಕಪ್ಪು ಬಟ್ಟೆ ಧರಿಸಿದ್ರೆ ಕಾಡುತ್ತೆ ಈ ಸಮಸ್ಯೆ

ಪ್ರತಿಯೊಬ್ಬರ ಆಯ್ಕೆ, ಆಸೆಗಳು ಬೇರೆ ಬೇರೆಯಾಗಿರುತ್ತವೆ. ತಮಗಿಷ್ಟವಾಗುವ ಬಣ್ಣದ ಬಟ್ಟೆಯನ್ನು ಜನರು ಧರಿಸ್ತಾರೆ.

ಇತ್ತೀಚಿನ ದಿನಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಸಾಮಾನ್ಯವಾಗಿದೆ. ಬಹುತೇಕರು ಕಪ್ಪು ಬಣ್ಣದ ಬಟ್ಟೆಯನ್ನು ಇಷ್ಟಪಡ್ತಾರೆ. ಕೆಲವರಿಗೆ ಕಪ್ಪು ಬಣ್ಣದ ಬಟ್ಟೆ ಎಷ್ಟು ಪ್ರಿಯವೆಂದ್ರೆ ಅವ್ರು ರಾತ್ರಿ ಕೂಡ ಕಪ್ಪು ಬಣ್ಣದ ಬಟ್ಟೆ ಧರಿಸಿ ಮಲಗ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪು ಬಟ್ಟೆ ಧರಿಸುವುದು ಒಳ್ಳೆಯದಲ್ಲ.

ಶಾಸ್ತ್ರಗಳ ಪ್ರಕಾರ, ರಾತ್ರಿ ಕಪ್ಪು ಬಟ್ಟೆಯನ್ನು ಧರಿಸಬಾರದು. ಕಪ್ಪು ಬಣ್ಣ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ರಾತ್ರಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಕಪ್ಪು ಬಟ್ಟೆಗೆ ನಕಾರಾತ್ಮಕ ಶಕ್ತಿಗಳು ಆಕರ್ಷಣೆಗೊಳ್ಳುತ್ತವೆ. ನಕಾರಾತ್ಮಕ ಶಕ್ತಿ ಕಪ್ಪು ಬಟ್ಟೆ ಧರಿಸಿರುವ ವ್ಯಕ್ತಿಯನ್ನು ನಿಯಂತ್ರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದ್ರಿಂದ ವ್ಯಕ್ತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾತ್ರಿ ಕಪ್ಪು ಬಟ್ಟೆ ಧರಿಸುವುದ್ರಿಂದ ವಾಸ್ತುದೋಷವುಂಟಾಗುತ್ತದೆಯಂತೆ. ಇದ್ರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯಲ್ಲಿ ಶಾಂತಿ ಕಡಿಮೆಯಾಗಿ, ಅನಾರೋಗ್ಯ, ಗಲಾಟೆ ಹೆಚ್ಚಾಗುತ್ತದೆ. ಹಾಗಾಗಿ ರಾತ್ರಿ ಕಪ್ಪು ಬಟ್ಟೆ ಧರಿಸಬಾರದು ಎನ್ನಲಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular