ಅತಿಯಾದ ಸಾಸಿವೆ ಎಣ್ಣೆ ಬಳಕೆ ತಂದೊಡ್ಡಯತ್ತೆ ಈ ಸಮಸ್ಯೆ

ಚಳಿಗಾಲದಲ್ಲಿ ಹೆಚ್ಚಿನವರು ದೇಹ ಬೆಚ್ಚಗಿರಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ. ಆದರೆ ಇದು ದೇಹಕ್ಕೆ ಎಷ್ಟು ಉತ್ತಮವೋ, ಅಷ್ಟೇ ಹಾನಿಕಾರಕವಾಗಿದೆ. ಹಾಗಾಗಿ ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಂಡಿರಿ.

* ಸಾಸಿವೆ ಎಣ್ಣೆಯನ್ನು ಅತಿಯಾಗಿ ಬಳಸಿದರೆ ಕೆಮ್ಮು, ನಿರಂತರವಾಗಿ ಸೀನುವುದು, ಉಸಿರು ಕಟ್ಟಿಕೊಳ್ಳುವುದು, ಮೂಗಿನಿಂದ ನೀರು ಸೋರುವುದು ಮುಂತದ ಸಮಸ್ಯೆ ಕಾಡುತ್ತದೆ. ಇಂತಹ ಸಮಸ್ಯೆ ನಿಮಗೆ ಕಂಡುಬಂದರೆ ಸಾಸಿವೆ ಎಣ್ಣೆ ಬಳಸಬೇಡಿ.

*ಸಾಸಿವೆ ಎಣ್ಣೆಯಲ್ಲಿ ಹಾನಿಕಾರಕ ರಾಸಾಯನಿಕವಿದೆ. ಇದು ದೇಹಕ್ಕೆ ಹಚ್ಚಿದ ತಕ್ಷಣ ಸುಡುವ ವೇದನೆ ಕಾಡುತ್ತದೆ. ಇದರಿಂದ ಚರ್ಮಕ್ಕೆ ಹಾನಿಯಾಗಬಹುದು.

* ನೀವು ಸಾಸಿವೆ ಎಣ್ಣೆಯನ್ನು ಕೂದಲು ಹಚ್ಚುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಯಾಕೆಂದರೆ ಇದು ಕೂದಲಿನ ರಂಧ್ರಗಳನ್ನು ಮುಚ್ಚುವುದರಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ.

*ಅಲ್ಲದೇ ಸಾಸಿವೆ ಎಣ್ಣೆಯಲ್ಲಿರುವ ಅಂಶ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ. ಇದರಿಂದ ಚರ್ಮದ ಮೇಲೆ ತುರಿಕೆ ಮತ್ತು ಗುಳ್ಳೆಗಳು ಮೂಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read