HomeInternationalತಾಯಿ ಶವವನ್ನು 13 ವರ್ಷ ಮನೆಯಲ್ಲಿಟ್ಟುಕೊಂಡಿದ್ದ ಮಗ ! ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

ತಾಯಿ ಶವವನ್ನು 13 ವರ್ಷ ಮನೆಯಲ್ಲಿಟ್ಟುಕೊಂಡಿದ್ದ ಮಗ ! ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

ಮಕ್ಕಳು ತಮ್ಮ ತಾಯಂದಿರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುತ್ತಾರೆ. ಆದರೆ ದುಃಖಿತ ಮಗನು ತನ್ನ ತಾಯಿಯ ಶವವನ್ನು ಆಕೆಯ ಸಮಾಧಿಯಿಂದ ಅಗೆದು 13 ವರ್ಷಗಳ ಕಾಲ ತನ್ನ ಸೋಫಾದಲ್ಲಿ ಇಟ್ಟುಕೊಂಡಿರುವ ಭಯಾನಕ ಘಟನೆ ನಡೆದಿದೆ. ಆ ವ್ಯಕ್ತಿ ಈಗ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾನೆ.

ಪೋಲೆಂಡ್‌ನ ರಾಡ್ಲಿನ್‌ನ ನಿವಾಸಿ ಮರಿಯನ್ ಎಲ್ ಅವರ ಮನೆಯೊಳಗೆ ಮಹಿಳೆಯ ರಕ್ಷಿತ ಅವಶೇಷಗಳನ್ನು ಪೊಲೀಸರು ಕಂಡುಕೊಂಡಿದ್ದಾರೆ. ಮರಿಯನ್​ ಮನೆಬಿಟ್ಟು ಎಲ್ಲಿಯೂ ಬರಲಾಗದ ಕಾರಣ ಸಂದೇಹಗೊಂಡ ಸೋದರ ಮಾವ ಮನೆ ಪರಿಶೀಲಿಸಿದಾಗ ಈ ವಿಷಯ ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ 76 ವರ್ಷದ ಈತನ ಮನೆಯನ್ನು ಪೊಲೀಸರು ತಪಾಸಣೆ ಮಾಡಿದಾಗ ಹಳೆಯ ದಿನಪತ್ರಿಕೆಗಳ ರಾಶಿಯ ನಡುವೆ ಅವನ ಮಂಚದ ಮೇಲೆ ತಾಯಿಯ ಅವಶೇಷಗಳು ಕಂಡುಬಂದಿವೆ. ರಾಸಾಯನಿಕ ಸಿಂಪಡಿಸುತ್ತಾ ಅದನ್ನು ಅವನು ಮನೆಯಲ್ಲಿ ಇಟ್ಟುಕೊಂಡಿರುವುದು ತಿಳಿದು ಬಂದಿದೆ. ಆ ಮಹಿಳೆಯು 13 ವರ್ಷಗಳ ಹಿಂದೆ ನಿಧನರಾಗಿರುವುದು ಶವ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ನಂತರ ಅವಶೇಷವನ್ನು ಸಮಾಧಿ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular