ಬೆನ್ನು ನೋವು ನಿವಾರಿಸುತ್ತೆ ಈ ಪೋಷಕಾಂಶಭರಿತ ಆಹಾರ

ಬೆನ್ನಿನ ಆರೋಗ್ಯಕ್ಕೆ ಬೇಕಾದಷ್ಟು ವ್ಯಾಯಾಮದ ಜೊತೆಗೆ ಪೋಷಕಾಹಾರವು ಕೂಡ ಅಷ್ಟೇ ಅಗತ್ಯ. ಆ ಆಹಾರ ಎಷ್ಟೋ ಗಾಯಗಳನ್ನು ಬೇಗ ವಾಸಿ ಮಾಡಿ ಬೆನ್ನು ನೋವನ್ನು ನಿವಾರಿಸುತ್ತದೆ. ಆ ಪೋಷಕಾಂಶಗಳ ವಿವರ ಇಲ್ಲಿದೆ.

ಕ್ಯಾಲ್ಸಿಯಂ

ಆಹಾರದಲ್ಲಿ ಕ್ಯಾಲ್ಸಿಯಂ ಅನ್ನು ಹೇರಳವಾಗಿ ತೆಗೆದುಕೊಳ್ಳುವುದರಿಂದ ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ. ಹಾಲು-ಮೊಸರು, ಬೆಣ್ಣೆಯೊಂದಿಗೆ ಹಸಿರು ಸೊಪ್ಪುಗಳು, ಮೀನುಗಳಲ್ಲಿ ಕ್ಯಾಲ್ಶಿಯಂ ಹೆಚ್ಚಾಗಿರುತ್ತದೆ.

ವಿಟಮಿನ್ ಡಿ3

ಕ್ಯಾಲ್ಸಿಯಂ ಮೂಳೆಗಳ ಒಳಗೆ ಹೋಗುವ ಹಾಗೆ ಮಾಡಿ ಅವುಗಳ ಆರೋಗ್ಯವನ್ನು ಕಾಪಾಡುವಲ್ಲಿ ವಿಟಮಿನ್ ಡಿ ಅದ್ಭುತವಾದ ಪಾತ್ರ ವಹಿಸುತ್ತದೆ. ಸ್ವಾಭಾವಿಕವಾದ ಬಿಸಿಲಿನೊಂದಿಗೆ ಮೀನು, ಲಿವರ್, ಮೊಟ್ಟೆಯಂತಹ ಆಹಾರಗಳಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ.

ವಿಟಮಿನ್ ಸಿ

ಚಿಗುರು ಮೂಳೆಯಲ್ಲಿ ಇರುವ ಕೊಲಜಿನ್ ಅಂತಹವನ್ನು ಏರ್ಪಡಿಸುವಲ್ಲಿ, ಮೂಳೆಗಳು, ಮಾಂಸಖಂಡಗಳು, ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ವಿಟಮಿನ್ ಸಿ ಯದ್ದು ಪ್ರಧಾನ ಪಾತ್ರ. ನಿಂಬೆ ಜಾತಿ ಹಣ್ಣುಗಳ ಜೊತೆಗೆ ಪೇರಳೆ ಹಣ್ಣು, ಟೊಮೆಟೊ, ಕ್ಯಾಪ್ಸಿಕಂ ಗಳಲ್ಲಿ ಇದು ಹೆಚ್ಚಾಗಿರುತ್ತದೆ. ಹಾಗೆ ಮಾಂಸ, ನಟ್ಸ್ ಅಂತಹವುಗಳಲ್ಲಿ ಪ್ರೊಟೀನ್ ಹೆಚ್ಚಾಗಿ ಇರುತ್ತದೆ.

ವಿಟಮಿನ್ ಬಿ 12

ಎಲ್ಲಾ ಬಗೆಯ ಮೀನುಗಳು, ಮಾಂಸದೊಂದಿಗೆ ತಾಜಾ ಹಣ್ಣುಗಳು, ತರಕಾರಿ, ಪೌಲ್ಟ್ರಿ ಉತ್ಪಾದನೆಯಲ್ಲಿ ವಿಟಮಿನ್ ಬಿ 12 ಪ್ರಮಾಣ ಹೆಚ್ಚು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read