ಒಳ್ಳೆಯ ಸ್ನೇಹಿತರನ್ನು ಹುಡುಕುವ ಸಲುವಾಗಿ ಕೆಲವರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಅದಕ್ಕಾಗಿಯೇ ಇಂದು ಹಲವಾರು ರೀತಿಯ ಡೇಟಿಂಗ್ ಆ್ಯಪ್ಗಳು ಲಭ್ಯವಿದೆ. ಕೆಲ ಯುವಕ-ಯುವತಿಯರು ಈ ಆ್ಯಪ್ ಬಳಸುವುದು ತಮ್ಮ ಜೊತೆ ಓಡಾಟ ಮಾಡಲು ಯಾರಾದರೂ ಸಿಗುತ್ತಾರೋ ಎನ್ನುವ ಕಾರಣಕ್ಕೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ಡೇಟಿಂಗ್ ಆ್ಯಪ್ನಲ್ಲಿ ಉದ್ಯೋಗವೂ ಸಿಗುತ್ತದೆ ಎಂದರೆ ನಂಬುತ್ತೀರಾ? ಅಂಥದ್ದೇ ಒಂದು ಘಟನೆ ಈಗ ವೈರಲ್ ಆಗಿದೆ.
ಅದ್ನಾನ್ ಖಾನ್ ಎಂಬ ಯುವಕ ಈ ಕುತೂಹಲದ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾನೆ. ಡೇಟಿಂಗ್ ಆ್ಯಪ್ಬಂಬಲ್ನಲ್ಲಿ ಡೇಟಿಂಗ್ ಮಾಡಲು ಹುಡುಕುತ್ತಿದ್ದರೆ, ಇವರಿಗೆ ಸಿಕ್ಕಿದ್ದು ಒಳ್ಳೆಯ ಉದ್ಯೋಗ. ಅದರ ಸ್ಕ್ರೀನ್‌ಶಾಟ್ ಅನ್ನು ಅವರು ಶೇರ್ ಮಾಡಿಕೊಂಡಿದ್ದಾನೆ. ಅದ್ನಾನ್ ಸ್ಟಾರ್ಟಪ್‌ನ ಪ್ರತಿಭಾ ಸಂಪಾದನೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಾನವ ಸಂಪನ್ಮೂಲ ಉದ್ಯೋಗಿಯೊಂದಿಗೆ ಸಂಭಾಷಣೆ ಪ್ರಾರಂಭಿಸಿದ್ದಾರೆ.
ನಂತರ ಆ ಚಾಟ್ ಮುಂದುವರೆದ ನಂತರ ಅದ್ನಾನ್ ತಾನು ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಬಗ್ಗೆ ತಿಳಿಸಿದ್ದಾರೆ. ತನ್ನ ಈ ಅರ್ಹತೆಗೆ ಸ್ಟಾರ್ಟ್‌ಅಪ್ ಮಾಡಬಹುದೇ ಎಂದು ಕೇಳಿದ್ದಾನೆ. ಹೀಗೆ ಅತ್ತ ಕಡೆಯಿಂದ ಡೇಟಿಂಗ್ ಆ್ಯಪ್ನಲ್ಲಿದ್ದಾಕೆ ಇದಕ್ಕೆ ತಾನು ಸಹಾಯ ಮಾಡಬಹುದು ಎಂದು ಹೇಳುವ ಮೂಲಕ ಮಾರ್ಗದರ್ಶನ ನೀಡಿದ್ದಾರೆ.
ಇದನ್ನು ಶೇರ್ ಮಾಡಿಕೊಂಡಿರುವ ಯುವಕ, “ನೀವು ಉದ್ಯೋಗಗಳಿಗಾಗಿ ಲಿಂಕ್ಡ್‌ಇನ್ ಅನ್ನು ಬಳಸುತ್ತೀರಿ. ನಾನು ಬಂಬಲ್ ಅನ್ನು ಬಳಸುತ್ತೇನೆ. ನಾವೆಲ್ಲರೂ ಒಂದೇ ಅಲ್ಲ ಬ್ರೋ” ಎಂದು ಬರೆದುಕೊಂಡಿದ್ದು, ಇದಕ್ಕೆ ಹಲವಾರು ಕಮೆಂಟ್ಸ್ ಬರುತ್ತಿವೆ.
you use LinkedIn for jobs I use Bumble we’re not the same bro 😭 pic.twitter.com/JJUbW6AFwb
— Adnaan (@theadnaankhan) January 22, 2023
I’m interviewing here just finalizing the dates haha
— Adnaan (@theadnaankhan) January 22, 2023
bro got hrzoned ☠️
— Rishabh (@pingrishabh) January 22, 2023

