ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಲ್ಲಿ ಆಹಾರ ಕಾನೂನು ಮತ್ತು ನೀತಿ ಪಿಎಚ್‌ಡಿ ಅಭ್ಯರ್ಥಿಯಾಗಿರುವ ಮಧುರಾ ರಾವ್ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ರುಚಿಕರವಾದ ಊಟದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ತಟ್ಟೆಯಲ್ಲಿನ ಊಟದ ಆಧಾರದ ಮೇಲೆ ತಾನು ಭಾರತದ ಯಾವ ಪ್ರದೇಶದಲ್ಲಿದ್ದೇನೆ ಎಂದು ಊಹಿಸುವಂತೆ ಈಕೆ ಕೇಳಿಕೊಂಡಿದ್ದಾರೆ.
ಇದು ಸಾಮಾನ್ಯವಾಗಿರುವ ಟ್ವಿಟರ್ ಆಗಿದ್ದರೂ, ಹಲವಾರು ಫಾಲೋವರ್ಸ್ ಹೊಂದಿರುವ ಮಧುರಾ ರಾವ್ ಅವರ ಪ್ರಶ್ನೆಗೆ ಥರಹೇವಾರಿ ಕಮೆಂಟ್ಸ್ ಬರುತ್ತಿವೆ. ಒಬ್ಬೊಬ್ಬರು ಒಂದೊಂದು ಭಾಗದ ಕುರಿತು ಕಮೆಂಟ್ ಮಾಡಿದ್ದಾರೆ.
ಅಸಲಿಗೆ ಈ ಚಿತ್ರದಲ್ಲಿ, ಎಲೆಗಳಿಂದ ಸುತ್ತಿದ ಸವಿಯಾದ ಪದಾರ್ಥವಿದೆ. ಅದು ಸಮೃದ್ಧವಾದ ಮಸಾಲೆಯುಕ್ತ, ದಪ್ಪನಾದ ಭಕ್ಷ್ಯ ಎಂಬುದು ತಿಳಿಯುತ್ತದೆ. ಹಸಿರು ಮೇಲೋಗರದ ಬಟ್ಟಲು ಮತ್ತು ಬಿಳಿ ನೂಡಲ್ ತರಹದ ಎಳೆಗಳು ಕೂಡ ಚಿತ್ರದಲ್ಲಿದೆ. ಇದು ಎಲ್ಲಿಯ ಭಕ್ಷ್ಯ ಎಂದು ಈಕೆ ಕೇಳಿದ್ದಾರೆ.
ಬಿಳಿ ಅಕ್ಕಿ ಹಿಟ್ಟಿನ ನೂಡಲ್ಸ್ ಅನ್ನು ಆಧರಿಸಿ ಕೇರಳ ಮತ್ತು ಕರ್ನಾಟಕ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ಪಶ್ಚಿಮ ಬಂಗಾಳ ಎಂದಿದ್ದರೆ, ಮತ್ತಿಷ್ಟು ಮಂದಿ ಈಶಾನ್ಯ ಪ್ರದೇಶದ ಭಕ್ಷ್ಯದಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಮಹಾರಾಷ್ಟ್ರ, ಪಂಜಾಬ್ ಎಂದೂ ಊಹಿಸಿದ್ದಾರೆ. ಒಟ್ಟಿನಲ್ಲಿ ಈ ಭಕ್ಷ್ಯ ಎಲ್ಲಿಯದ್ದು ಎಂದು ತಿಳಿದುಬಂದಿಲ್ಲ.
https://twitter.com/madhurarrao/status/1624849349133103106?ref_src=twsrc%5Etfw%7Ctwcamp%5Etweetembed%7Ctwterm%5E1624849349133103106%7Ctwgr%5Ef95010c0078de33dfe9e54b36a0a14a14fb7ed93%7Ctwcon%5Es1_&ref_url=https%3A%2F%2Fwww.news18.com%2Fbuzz%2Fthis-lip-smackingly-delicious-platter-is-keeping-desi-twitter-super-busy-7082563.html
https://twitter.com/madhurarrao/status/1624849349133103106?ref_src=twsrc%5Etfw%7Ctwcamp%5Etweetembed%7Ctwterm%5E1624978406462070784%7Ctwgr%5Ef95010c0078de33dfe9e54b36a0a14a14fb7ed93%7Ctwcon%5Es2_&ref_url=https%3A%2F%2Fwww.news18.com%2Fbuzz%2Fthis-lip-smackingly-delicious-platter-is-keeping-desi-twitter-super-busy-7082563.html
https://twitter.com/madhurarrao/status/1624849349133103106?ref_src=twsrc%5Etfw%7Ctwcamp%5Etweetembed%7Ctwter