ನಿಮ್ಮ ́ಮುಖ ಕಾಂತಿʼ ಡಬಲ್‌ ಮಾಡುತ್ತೆ ಅಡುಗೆ ಮನೆಯಲ್ಲಿರೋ ಈ ವಸ್ತು

ಹೊಳೆಯುವ ಮುಖ ಕಾಂತಿ ನಮ್ಮದಾಗಬೇಕು ಅಂತ ಎಲ್ಲರೂ ಬಯಸ್ತಾರೆ. ಮೊಡವೆ ರಹಿತ ಸುಂದರ ತ್ವಚೆಗಾಗಿ ಜಾಹೀರಾತು ನೋಡಿ ಸಾಕಷ್ಟು ಉತ್ಪನ್ನಗಳನ್ನ ಟ್ರೈ ಮಾಡ್ತಾರೆ. ಇದಕ್ಕೆಲ್ಲ ದುಡ್ಡು ಸುರಿಯುವ ಬದಲು ನಿಮ್ಮ ಅಡುಗೆ ಮನೆಯಲ್ಲಿರೋ ಅಡುಗೆ ಸೋಡಾವನ್ನು ಸರಿಯಾಗಿ ಬಳಸಿ ನೋಡಿ.

ಅಡುಗೆ ಸೋಡಾವನ್ನು ಬಳಸುವ ರೀತಿ ತಪ್ಪಾದ್ರೆ ಅದು ನಿಮ್ಮ ಚರ್ಮವನ್ನು ಶುಷ್ಕವಾಗಿಸುತ್ತದೆ. ಹಾಗಾಗಿ ಅದನ್ನು ಬಳಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು.

ಒಂದು ಬೌಲ್‌ನಲ್ಲಿ 2 ಚಮಚ ಅಡುಗೆ ಸೋಡಾ ತೆಗೆದುಕೊಳ್ಳಿ. ಅದಕ್ಕೆ ನೀರು ಬೆರೆಸಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಮುಖದ ಮೇಲಿರುವ ಮೊಡವೆಗಳ ಗುರುತಿನ ಮೇಲೆ ಅದನ್ನು ಹಚ್ಚಿ. ಫೇಸ್‌ ಮಾಸ್ಕ್‌ ನಂತೆ ಇಡೀ ಮುಖಕ್ಕೆ ಹಚ್ಚಬೇಡಿ. ಕನಿಷ್ಠ 10 ನಿಮಿಷಗಳ ಕಾಲ ಅದನ್ನು ಹಾಗೇ ಬಿಡಿ. ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಈ ವಿಧಾನವನ್ನು ವಾರಕ್ಕೊಮ್ಮೆ ಮಾತ್ರ ಮಾಡುವುದು ಉತ್ತಮ. ಅಡಿಗೆ ಸೋಡಾ ಉರಿಯೂತ ತಡೆಯುವ ಗುಣಲಕ್ಷಣಗಳನ್ನು ಹೊಂದಿದೆ. ಚರ್ಮದ ಕಿರಿಕಿರಿ, ದದ್ದು, ಊತ ಇತ್ಯಾದಿಗಳನ್ನು ಕಡಿಮೆ ಮಾಡುತ್ತದೆ. ಮೊಡವೆಗಳಿಗೂ ಇದು ಪರಿಣಾಮಕಾರಿ ಮದ್ದು. ಅಡುಗೆ ಸೋಡಾ ನಿಮ್ಮ ತ್ವಚೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ. ಮುಖದ ಮೇಲಿನ ಕಪ್ಪು ಚುಕ್ಕೆಗಳನ್ನು ಇದು ನಿವಾರಿಸುತ್ತದೆ.

ಮುಖವನ್ನು ಹೈಡ್ರೇಟ್‌ ಆಗಿಡಲು ಅಡುಗೆ ಸೋಡಾ ನೆರವಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ಮಾಲಿನ್ಯದಿಂದ ಚರ್ಮವನ್ನು ರಕ್ಷಿಸುತ್ತದೆ. ಚರ್ಮದ pH ಪ್ರಮಾಣವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮ ಎಣ್ಣೆಯುಕ್ತವಾಗಿದ್ದರೆ, ಅದರ ಅಡ್ಡಪರಿಣಾಮಗಳನ್ನು ಅಡುಗೆ ಸೋಡಾ ಕಡಿಮೆ ಮಾಡಬಲ್ಲದು. ನೀವು ಶುಷ್ಕ ಅಥವಾ ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ಅಡುಗೆ ಸೋಡಾವನ್ನು ಬಳಸಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read