ಹುಡುಗ್ರು ಹುಡುಗಿಯರ ತುಟಿ ನೋಡುವುದು ಈ ಕಾರಣಕ್ಕೆ

ಹುಡುಗಿಯರ ಪ್ರತಿಯೊಂದು ಅಂಗವೂ ತುಂಬಾ ಸುಂದರವಾಗಿರುತ್ತದೆ. ಕೆಲವು ಅಂಗಗಳು ತುಂಬಾ ಆಕರ್ಷಕವಾಗಿರುತ್ತವೆ. ಹುಡುಗಿಯರ ಕಣ್ಣು ಹಾಗೂ ತುಟಿ ಹುಡುಗ್ರನ್ನು ಬಹಳ ಬೇಗ ಆಕರ್ಷಿಸುತ್ತವೆ. ಹುಡುಗಿಯರು ತುಟಿಗೆ ಹಚ್ಚುವ ಬಣ್ಣ, ಅವ್ರ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಸಾಮಾನ್ಯವಾಗಿ ಹುಡುಗ್ರು, ಹುಡುಗಿಯರ ತುಟಿಯನ್ನು ನೋಡ್ತಾರೆ. ಇದಕ್ಕೆ ಕಾರಣವೇನು ಗೊತ್ತಾ?

ಕೆಲ ಹುಡುಗ್ರು ಹುಡುಗಿಯರ ಕಣ್ಣುಗಳನ್ನು ನೋಡಲು ಭಯಪಡ್ತಾರೆ. ಹಾಗಾಗಿ ಅವ್ರ ತುಟಿಗಳನ್ನು ನೋಡಿ ಮಾತನಾಡ್ತಾರೆ.

ಹುಡುಗಿ ಯಾವಾಗ ಬಾಯಿ ಮುಚ್ಚುತ್ತಾಳಪ್ಪಾ ಎಂಬ ಪ್ರಶ್ನೆ ಅನೇಕ ಹುಡುಗರನ್ನು ಕಾಡುತ್ತದೆ. ಸ್ವಲ್ಪ ಸುಮ್ಮನಿರುತ್ತೀಯಾ ಎನ್ನಲು ಸಾಧ್ಯವಾಗುವುದಿಲ್ಲ. ಹಾಗಾಗಿ ತುಟಿ ನೋಡಿ, ಸೂಕ್ಷ್ಮವಾಗಿ ಸೂಚನೆ ನೀಡ್ತಾರೆ.

ಪ್ರೀತಿಯಲ್ಲಿ ಬಿದ್ದ ಹುಡುಗ್ರು ಕೂಡ ಹುಡುಗಿಯರ ತುಟಿಯನ್ನು ಹೆಚ್ಚಾಗಿ ನೋಡ್ತಾರೆ. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡ್ತೆನೆ. ನೀನೂ ನನ್ನನ್ನು ಅಷ್ಟೇ ಪ್ರೀತಿ ಮಾಡು ಎಂಬ ಭಾವನೆಯಲ್ಲಿ ತುಟಿಯನ್ನು ನೋಡ್ತಾರೆ.

ನೀವು ಏನು ಹೇಳ್ತಿದ್ದೀರಿ ಅದನ್ನು ನಿಮ್ಮ ತುಟಿ ಚಲನೆ ಮೂಲಕ ಅರ್ಥ ಮಾಡಿಕೊಳ್ಳಲು ಕೆಲ ಹುಡುಗ್ರು ಬಯಸ್ತಾರೆ. ಹಾಗಾಗಿಯೇ ಹುಡುಗಿಯರು ಮಾತನಾಡುವಾಗ ಅವ್ರ ತುಟಿಯನ್ನು ನೋಡ್ತಾರೆ.

ಲಿಪ್ಸ್ಟಿಕ್  ಮತ್ತು ನಿಮ್ಮ ತುಟಿ ಬಣ್ಣ ಅವ್ರ ಗಮನವನ್ನು ಸೆಳೆಯುತ್ತದೆ. ಇದೇ ಕಾರಣಕ್ಕೆ ಅವ್ರು ತುಟಿ ನೋಡಿ ಮಾತನಾಡ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read