HomeLatest Newsʼಸಂಗಾತಿʼಗಳಿಗೆ ರೊಮ್ಯಾನ್ಸ್ ಗೆ ಹೇಳಿ ಮಾಡಿಸಿದಂತಹ ಕಾಲ ಇದು

ʼಸಂಗಾತಿʼಗಳಿಗೆ ರೊಮ್ಯಾನ್ಸ್ ಗೆ ಹೇಳಿ ಮಾಡಿಸಿದಂತಹ ಕಾಲ ಇದು

ಡಿಸೆಂಬರ್ ತಿಂಗಳು ರೊಮ್ಯಾನ್ಸ್ ಗೆ ಹೇಳಿ ಮಾಡಿಸಿದಂತಹ ಕಾಲ. ವರ್ಷದ ಕೊನೆಯ ತಿಂಗಳಾಗಿದ್ದರಿಂದ ಬಾಕಿ ಇರುವ ಎಲ್ಲಾ ಕೆಲಸಗಳನ್ನೂ ಮುಗಿಸಬಹುದು. ನವೆಂಬರ್ ನಿಂದ್ಲೇ ಚಳಿಗಾಲ ಶುರುವಾಗಿರುತ್ತದೆ. ಹಾಗಾಗಿ ಸಂಗಾತಿಗಳಿಗೆ ಇದು ಬೆಸ್ಟ್ ಸಮಯ. ಜೊತೆಯಾಗಿ ಹೆಚ್ಚು ಕಾಲ ಕಳೆಯಬಹುದು.

ಡಿಸೆಂಬರ್ ಅಂದ್ರೆ ಒಂದು ರೀತಿಯ ಹಬ್ಬದ ಸಮಯ. ಕ್ರಿಸ್ಮಸ್ ಜೊತೆಗೆ ಹೊಸ ವರ್ಷದ ಸಡಗರವೂ ಇರುತ್ತದೆ. ಹಾಗಾಗಿ ಸೆಕ್ಸ್ ಗೆ ಇದು ಉತ್ತಮ ಸಮಯ ಎನ್ನುತ್ತಾರೆ ತಜ್ಞರು. ಎಲ್ಲಾ ಬೇಸರ, ನೋವುಗಳನ್ನು ಮರೆತು ಒಂದಾಗಲು ಇದು ಸುಸಮಯವಂತೆ. ಚುಮು ಚುಮು ಚಳಿ ಕೂಡ ದಂಪತಿಯನ್ನು ಒಂದು ಮಾಡಲು ಸಹಕರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರ್ಷದ ಕೊನೆಯ ತಿಂಗಳಿನಲ್ಲಿ ನೀವು ಅಂದುಕೊಂಡಿದ್ದನ್ನೆಲ್ಲ ಮಾಡಬಹುದು. ಮುರಿದ ಸಂಬಂಧಗಳನ್ನು ಜೋಡಿಸುವ ಪ್ರಯತ್ನ ಮಾಡಬಹುದು, ಆತ್ಮೀಯರನ್ನು ಭೇಟಿಯಾಗಬಹುದು. ಈ ವರ್ಷ ಮತ್ತೆ ಮರಳಿ ಬರಲಾರದು ಅನ್ನೋ ಭಾವನೆ ನಿಮ್ಮಲ್ಲಿ ಒಂದು ರೀತಿಯ ಹೊಸತನವನ್ನು ಉಂಟು ಮಾಡುತ್ತದೆ.

ಸಾಮಾನ್ಯವಾಗಿ ಎಲ್ಲರೂ ಡಿಸೆಂಬರ್ ನಲ್ಲಿ ರಜಾ ಕಳೆಯಲು ತೆರಳ್ತಾರೆ. ಒಳ್ಳೆ ತಂಪು ವಾತಾವರಣ, ರುಚಿಯಾದ ಆಹಾರವಿದ್ರೆ ಸಹಜವಾಗಿಯೇ ಸಂಗಾತಿಗಳಲ್ಲಿ ಪರಸ್ಪರ ಆಕರ್ಷಣೆಯೂ ಮೂಡುತ್ತದೆ. ಚಳಿಗಾಲದಲ್ಲಿ ಅಫ್ರೋಡಿಸೈಕಲ್ ಫುಡ್ ಗಳಾದ ಚಾಕಲೇಟ್ ಹಾಗೂ ಸ್ಪೈಸಿ ತಿನಿಸುಗಳನ್ನು ಸೇವಿಸೋದ್ರಿಂದ ಸಹಜವಾಗಿಯೇ ಲೈಂಗಿಕ ಆಸಕ್ತಿ ಹೆಚ್ಚಾಗಿರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular