ಬೇಸಿಗೆಯಲ್ಲಿ ನೆಗಡಿ, ಕೆಮ್ಮು, ಜ್ವರ ಪದೇ ಪದೇ ಕಾಡುವುದು ಈ ಕಾರಣಕ್ಕೆ

ಬೇಸಿಗೆಯಲ್ಲಿ ವಿಪರೀತ ಬಿಸಿಲು, ಸೆಖೆ ಇವೆಲ್ಲ ಸಾಮಾನ್ಯ. ಇದರಿಂದಾಗಿಯೇ ಬೆವರುವಿಕೆ ಜಾಸ್ತಿಯಾಗಿ ಡಿಹೈಡ್ರೇಶನ್‌ ಕೂಡ ಉಂಟಾಗುತ್ತದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ನೆಗಡಿ, ಕೆಮ್ಮು ಮತ್ತು ಜ್ವರದ ಭಯ ಹೆಚ್ಚು ಎಂದು ನಾವೆಲ್ಲ ಅಂದುಕೊಳ್ಳುತ್ತೇವೆ. ಆದರೆ ಬೇಸಿಗೆಯಲ್ಲಿ ಕೂಡ ಶೀತ ಮತ್ತು ಕೆಮ್ಮಿನ ಸಮಸ್ಯೆ ಜಾಸ್ತಿಯಾಗಿರುತ್ತದೆ.

ಬೇಸಿಗೆಯಲ್ಲಿ ನೆಗಡಿ, ಕೆಮ್ಮಿಗೆ ಕಾರಣ…

ಹಠಾತ್ ತಾಪಮಾನ ಬದಲಾವಣೆ

ಬೇಸಿಗೆಯಲ್ಲಿ ಶೀತಕ್ಕೆ ಮುಖ್ಯ ಕಾರಣವೆಂದರೆ ತಾಪಮಾನದಲ್ಲಿನ ಹಠಾತ್ ಬದಲಾವಣೆ. ಏಕಾಏಕಿ ಹೊರಗಿನ ಶಾಖದಿಂದ ತಣ್ಣನೆಯ ಎಸಿ ಅಥವಾ ಕೂಲರ್‌ ಬಳಿಗೆ ಹೋಗುವುದರಿಂದ ದೇಹದ ಉಷ್ಣತೆಯು ತ್ವರಿತವಾಗಿ ಬದಲಾಗುತ್ತದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಶೀತ ವೈರಸ್ ದಾಳಿಗೆ ಸುಲಭವಾಗಿ ಕಾರಣವಾಗುತ್ತದೆ.

ಹೆಚ್ಚು ತಣ್ಣನೆಯ ಆಹಾರ ಸೇವನೆ

ಬೇಸಿಗೆಯಲ್ಲಿ ಐಸ್‌ಕ್ರೀಂ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಬಿಸಿಲಿನಿಂದ ಹೊರಬಂದ ತಕ್ಷಣ ತಣ್ಣೀರು ಅಥವಾ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಇದರಿಂದಾಗಿ ಶೀತ, ಕೆಮ್ಮು ಮತ್ತು ಜ್ವರದ ಅಪಾಯ ಹೆಚ್ಚಾಗುತ್ತದೆ.

ಆರ್ದ್ರತೆ ಮತ್ತು ಬೆವರು

ಬೇಸಿಗೆಯಲ್ಲಿ ಅತಿಯಾದ ಆರ್ದ್ರತೆ ಮತ್ತು ಬೆವರುವಿಕೆ ಕೂಡ ಶೀತಕ್ಕೆ ಕಾರಣವಾಗಬಹುದು. ಆರ್ದ್ರ ವಾತಾವರಣದಲ್ಲಿ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಬೆವರುವಿಕೆಯಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೆಗಡಿಯಾಗುತ್ತದೆ.

ಮಾಲಿನ್ಯ ಮತ್ತು ಅಲರ್ಜಿ

ಬೇಸಿಗೆಯಲ್ಲಿ ಮಾಲಿನ್ಯ ಮತ್ತು ಅಲರ್ಜಿ ಕೂಡ ಶೀತಕ್ಕೆ ಪ್ರಮುಖ ಕಾರಣ. ಬೇಸಿಗೆಯಲ್ಲಿ ಗಾಳಿಯಲ್ಲಿ ಪರಾಗದ ಪ್ರಮಾಣವು ಹೆಚ್ಚಾಗುತ್ತದೆ, ಇದು ಅಲರ್ಜಿ ಉಂಟುಮಾಡಬಹುದು. ಸೀನುವಿಕೆ, ಮೂಗಿನ ದಟ್ಟಣೆ ಮತ್ತು ಗಂಟಲು ನೋವು ಇವೆಲ್ಲ ಅಲರ್ಜಿ ಶೀತದ ಲಕ್ಷಣಗಳು. ಇದಲ್ಲದೆ ಕಲುಷಿತ ವಾತಾವರಣ ಕೂಡ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ, ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read