HomeBusinessಇದೇ ಮೊದಲ ಬಾರಿಗೆ KSDL 2 ಸಾವಿರ ಕೋಟಿ ರೂ. ವಹಿವಾಟು, 507 ಕೋಟಿ ರೂ....

ಇದೇ ಮೊದಲ ಬಾರಿಗೆ KSDL 2 ಸಾವಿರ ಕೋಟಿ ರೂ. ವಹಿವಾಟು, 507 ಕೋಟಿ ರೂ. ಲಾಭ

ಬೆಂಗಳೂರು: ಜನಪ್ರಿಯ ಮೈಸೂರು ಸ್ಯಾಂಡಲ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಉತ್ಪಾದಿಸುವ ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಯಮಿತ(ಕೆ.ಎಸ್‌.ಡಿ.ಎಲ್.) ಇದೇ ಮೊದಲ ಬಾರಿಗೆ 2 ಸಾವಿರ ಕೋಟಿ ರೂ. ವಹಿವಾಟು ನಡೆಸಿದ್ದು, 507 ಕೋಟಿ ರೂ. ಲಾಭ ಗಳಿಸಿದೆ.

ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ನಷ್ಟದಲ್ಲಿದ್ದ ಕೆ.ಎಸ್.ಡಿ.ಎಲ್. ಲಾಭದಾಯಕ ಸರ್ಕಾರಿ ಸಂಸ್ಥೆಯಾಗಿ ಬದಲಾಗಿದೆ. 110 ವರ್ಷಗಳಲ್ಲಿ ಮೊದಲ ಬಾರಿಗೆ 2025-26 ಆರ್ಥಿಕ ವರ್ಷದಲ್ಲಿ 2016 ಕೋಟಿ ರೂ. ವಹಿವಾಟು ನಡೆಸಿದೆ.

48,496 ಮೆಟ್ರಿಕ್ ಟನ್ ನಷ್ಟು ವಿವಿಧ ಉತ್ಪನ್ನಗಳ ಉತ್ಪಾದನೆ ಮಾಡಿ 507 ಕೋಟಿ ರೂಪಾಯಿ ಲಾಭ ಗಳಿಸಿದೆ. ಸಾಧನೆ ಮಾಡಿದ ನೌಕರರನ್ನು ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಕೆ.ಎಸ್‌.ಡಿ.ಎಲ್. ಅಧ್ಯಕ್ಷ ಅಪ್ಪಾಜಿ ಸಿ.ಎಸ್. ನಾಡಗೌಡ ಸನ್ಮಾನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಸಚಿವ ಎಂ.ಬಿ. ಪಾಟೀಲ್, KS&DL ಸಾರ್ವಕಾಲಿಕ ದಾಖಲೆ 2025-26 ಸಾಲಿನಲ್ಲಿ ರೂ. 2016 ಕೋಟಿ ವಹಿವಾಟು ರೂ. 507 ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KS&DL) ತನ್ನ ಬೆಳವಣಿಗೆಯ ಪಥದಲ್ಲಿ ಗಮನಾರ್ಹ ಸಾಧನೆ ಮಾಡಿದೆ. 105 ವರ್ಷಗಳ ನಂತರ ₹1,000 ಕೋಟಿ ವಾರ್ಷಿಕ ವಹಿವಾಟು ತಲುಪಿದ್ದ ಸಂಸ್ಥೆಯು, ಕೇವಲ ನಾಲ್ಕು ವರ್ಷಗಳಲ್ಲಿ ₹2,000 ಕೋಟಿಗೂ ಅಧಿಕ ವಹಿವಾಟು ನಡೆಸುವ ಮೂಲಕ ಮೂಲಕ ಸಾಧನೆಯ ಹೊಸಯುಗದಲ್ಲಿ ಮತ್ತೊಂದು ಮಹತ್ವದ ದಾಖಲೆ ಬರೆದಿದೆ.

ಯಾವುದೇ ಹೆಚ್ಚುವರಿ ಯಂತ್ರೋಪಕರಣಗಳ ಬಳಕೆಯಿಲ್ಲದೆ, ಹಾಗೂ ನೌಕರರ ಸಂಖ್ಯೆಯಲ್ಲಿ ಹೆಚ್ಚಳವಿಲ್ಲದೆ ಕಾರ್ಯಕ್ಷಮತೆ ಹೆಚ್ಚಿಸಿ ಗಳಿಸಿದ ಸಾಧನೆಯಿದು.

ಕಳೆದ ಆರ್ಥಿಕ ವರ್ಷದಲ್ಲಿ ₹451 ಕೋಟಿ ನಿವ್ವಳ ಲಾಭ ದಾಖಲಿಸಿದ್ದ KS&DL, 2025-26ನೇ ಸಾಲಿನಲ್ಲಿ ₹500 ಕೋಟಿಗೂ ಅಧಿಕ ಲಾಭ ಗಳಿಸಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಇದೇ ವೇಳೆ, ಹಾಲಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಶತಮಾನಗಳ ಪರಂಪರೆ, ಗುಣಮಟ್ಟ ಮತ್ತು ವಿಶ್ವಾಸವನ್ನು ಹೊತ್ತು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ ಹೊಸ ಇತಿಹಾಸ ಬರೆಯುತ್ತಿದೆ.

105 ವರ್ಷಗಳ ನಂತರ ₹1,000 ಕೋಟಿ ವಾರ್ಷಿಕ ವಹಿವಾಟು ತಲುಪಿದ್ದ ಸಂಸ್ಥೆಯು, ಕಳೆದ ನಾಲ್ಕು ವರ್ಷಗಳಲ್ಲಿ ₹2,000 ಕೋಟಿಗೂ ಅಧಿಕ ವಹಿವಾಟು ನಡೆಸಿ ಮಹತ್ವದ ಮೈಲಿಗಲ್ಲು ದಾಟಿದೆ.

ಕಳೆದ ವರ್ಷ ರೂ. 451 ಕೋಟಿ ನಿವ್ವಳ ಲಾಭಗಳಿಸಿದ್ದೇ ಈವರೆವಿಗಿನ ದಾಖಲೆಯಾಗಿತ್ತು. ಆದರೆ ಈ ವರ್ಷ ರೂ. 500 ಕೋಟಿ ದಾಟಿ – ಮತ್ತೊಂದು ಹಂತ ಏರಿದೆ.

ರೂ. 150 ಕೋಟಿ ಸರ್ಕಾರಕ್ಕೆ ಹಸ್ತಾಂತರ- ಲಾಭಾಂಶ ಪಾವತಿಯಲ್ಲಿ 21ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಜಿಗಿತ!

57 ಹೊಸ ಉತ್ಪನ್ನಗಳು – ರಫ್ತುವಹಿವಾಟು ಹೆಚ್ಚಳ

2028ಕ್ಕೆ ರೂ. 3000 ಕೋಟಿಗೆ – 2030ಕ್ಕೆ ರೂ. 5,000 ಕೋಟಿ ತಲುಪುವ ಗುರಿ!

“ಮೇಡ್ ಇನ್ ಕರ್ನಾಟಕ” ಹೆಸರನ್ನು ವಿಶ್ವದ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ತಲುಪಿಸುವ ದೃಢ ಸಂಕಲ್ಪ ನಮ್ಮದು ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಜರುಗಿದ ಈ ಮಹತ್ವದ ಕಾರ್ಯಕ್ರಮದಲ್ಲಿ KSDL ಅಧ್ಯಕ್ಷರು ಹಾಗೂ ಶಾಸಕರಾದ ಅಪ್ಪಾಜಿ ನಾಡಗೌಡರು, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, KSDL ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular