ʼಸುವಾಸನೆʼಗಳು ದೇಹದ ಮೇಲೆ ಬೀರುತ್ತೆ ಈ ಪ್ರಭಾವ

ಹೂ ತೋಟದಲ್ಲಿ ಹಾದು ಹೋಗ್ತಾ ಇದ್ದರೆ, ಘಮ್ಮೆನ್ನುವ ಹೂವಿನ ಪರಿಮಳ ಮೂಗಿಗೆ ಸೋಕಿದರೆ ಆಹ್ಲಾದಕರವೆನಿಸುತ್ತದೆ.

ಆದರೆ ಸುವಾಸನೆ ಬರೀ ಆಹ್ಲಾದಕರ ಮಾತ್ರವಲ್ಲ, ಅದರಲ್ಲಿ ಔಷಧೀಯ ಗುಣವೂ ಇದೆ. ಕೆಲವು ನಿರ್ಧಿಷ್ಟ ಸುವಾಸನೆಗಳು ನಮ್ಮ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ತಿಳಿಯಿರಿ.

* ಮಲ್ಲಿಗೆ, ರೋಸ್‌ಮೆರಿ ಸುವಾಸನೆ ನೆನಪಿನ ಶಕ್ತಿಗೆ ತುಂಬಾ ಒಳ್ಳೆಯದು.

* ಕೆಲವೊಮ್ಮೆ ಯಾವುದೋ ಕಾರಣಕ್ಕೆ ತುಂಬಾ ಕಿರಿಕಿರಿ ಅನಿಸುತ್ತದೆ. ಆಗ ಗುಲಾಬಿ, ಚಕ್ಕೆಯ ಸುವಾಸನೆ ಗ್ರಹಿಸಿದರೆ ಮೆದುಳು ರಿಲ್ಯಾಕ್ಸ್‌ ಆಗುತ್ತದೆ.

* ಖಿನ್ನತೆಯಿಂದ ಹೊರಬರಲು ಮಲ್ಲಿಗೆ, ಲ್ಯಾವೆಂಡರ್‌, ಗುಲಾಬಿ, ಚಂದನ ಇವುಗಳ ಸುವಾಸನೆ ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ.

* ಆತ್ಮವಿಶ್ವಾಸ ಹೆಚ್ಚಿಸಲು ಚಂದನ ಹಾಗೂ ಮಲ್ಲಿಗೆ ಹೂವಿನ ವಾಸನೆ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ.

* ಅತ್ಯಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಲ್ಯಾವೆಂಡರ್‌, ನಿಂಬೆಹಣ್ಣು ಇವುಗಳ ವಾಸನೆ ಗ್ರಹಿಸಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ.

* ರೊಮ್ಯಾನ್ಸ್ ಮೂಡ್‌ಗೆ ಮಲ್ಲಿಗೆ ಹೂ, ಗುಲಾಬಿ, ಚಂದನ, ವೆನಿಲ್ಲಾ ಇವುಗಳ ಸುವಾಸನೆ ದೇಹದಲ್ಲಿ ರೊಮ್ಯಾನ್ಸ್‌ ಹಾರ್ಮೋನ್‌ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ.

* ತುಂಬಾ ಕೋಪ ಬಂದಾಗ ಮಲ್ಲಿಗೆ ಅಥವಾ ಗುಲಾಬಿ ಹೂವಿನ ವಾಸನೆಯನ್ನು ಗ್ರಹಿಸಿ ನೋಡಿ, ಕೋಪ ಕ್ಷಣಾರ್ಧದಲ್ಲಿ ಇಳಿದಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read