Viral Video | ಒಂದೇ ಸಮಯದಲ್ಲಿ ಗೆಳತಿ ಹಾಗೂ ತಾನು ತಾಯಿಯಾಗುತ್ತಿರುವ ಸಂಗತಿಯನ್ನು ವಿಭಿನ್ನವಾಗಿ ಹಂಚಿಕೊಂಡ ಮಹಿಳೆ

ಇಬ್ಬರು ಆತ್ಮೀಯ ಗೆಳತಿಯರು ಒಂದೇ ಸಮಯದಲ್ಲಿ ತಾಯಿಯಾಗುತ್ತಿರುವ ಸುದ್ದಿಯನ್ನ ವಿಭಿನ್ನವಾಗಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ಮಹಿಳೆ ಗರ್ಭಿಣಿಯಾಗುತ್ತಿರುವ ತನ್ನ ಆತ್ಮೀಯ ಗೆಳತಿಗೆ ತಾನೂ ಕೂಡ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂಬುದನ್ನ ವಿಭಿನ್ನವಾಗಿ ಬಹಿರಂಗಪಡಿಸಿದ್ದಾರೆ.

ಪ್ಯೂಬಿಟಿ ಎಂಬ ಇನ್ ಸ್ಟಾಗ್ರಾಂ ಖಾತೆಯಿಂದ ಈ ವಿಡಿಯೋನ ಹಂಚಿಕೊಳ್ಳಲಾಗಿದೆ. ಅದರಲ್ಲಿ
ಒಬ್ಬ ಮಹಿಳೆ ತನ್ನ ಆತ್ಮೀಯ ಸ್ನೇಹಿತೆಗೆ ಒಂದೇ ರೀತಿಯ ಎರಡು ಬೇಬಿ ಡ್ರೆಸ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾಳೆ.

ಅದರಲ್ಲಿ “ನಮ್ಮ ತಾಯಂದಿರಂತೆ ಬೆಸ್ಟೀಸ್” ಎಂಬ ಪದಗಳನ್ನು ಮುದ್ರಿಸಲಾಗಿದೆ. ತನ್ನ ಆತ್ಮೀಯ ಸ್ನೇಹಿತೆ ನೀಡಿದ ಉಡುಗೊರೆಯ ಅರ್ಥವನ್ನು ತಿಳಿಯಲು ಸ್ವಲ್ಪ ಸಮಯ ತೆಗೆದುಕೊಂಡ ಮತ್ತೊಬ್ಬ ಗೆಳತಿ ಕೊನೆಗೆ ಅದರರ್ಥವನ್ನ ತಿಳಿದುಕೊಂಡ ಬಳಿಕ ಭಾವನಾತ್ಮಕವಾಗಿ ಕುಸಿದುಹೋಗಿ ಸ್ನೇಹಿತೆಯನ್ನ ತಬ್ಬಿಕೊಳ್ಳುತ್ತಾಳೆ. ಈ ಭಾವನಾತ್ಮಕ ವಿಡಿಯೋ 9 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.

“ಅವರ ಮಕ್ಕಳು ಪರಸ್ಪರ ಒಂದೇ ರೀತಿಯ ಪ್ರೀತಿ ಮತ್ತು ಸ್ನೇಹವನ್ನು ಹೊಂದಿರುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಇನ್ಸ್ಟಾ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read