ನಟಿ ಮೀನಾಕುಮಾರಿಯ ಹಳೆ ಫೋಟೋದಲ್ಲಿರುವ ಈ ಫ್ರಿಡ್ಜ್ ಯಾವುದೆಂದು ಗುರುತಿಸಬಲ್ಲಿರಾ ?

ಆಫ್ತಾಬ್ ಪೂನಾವಾಲಾ ಹಾಗೂ ಶ್ರದ್ಧಾ ವಾಕರ್‌ ಪ್ರಕರಣವನ್ನು ನೆಟ್ಟಿಗರು ಮರೆತು ಮುಂದೆ ಸಾಗಿದ್ದಾರೆ. ಇದೀಗ ಫ್ರಿಡ್ಜ್ ಇರುವ ಫೋಟೋವೊಂದು ಬಾಲಿವುಡ್‌ನ ಹಿಂದಿನ ದಿನಗಳಿಗೆ ನೆಟ್ಟಿಗರನ್ನು ಕರೆದೊಯ್ಯುತ್ತಿದೆ.

ನಟಿ ಮೀನಾ ಕುಮಾರಿ ಫ್ರಿಡ್ಜ್ ಒಂದನ್ನು ಬಳಸುತ್ತಿರುವಂತೆ ಸೆರೆ ಹಿಡಿದಿರುವ ಈ ಚಿತ್ರವನ್ನು ನೋಡಿದ ನೆಟ್ಟಿಗರು ತಮ್ಮ ಮನೆಗಳಿಗೆ ಬಂದ ಮೊಟ್ಟ ಮೊದಲ ಫ್ರಿಡ್ಜ್‌ ಅನ್ನು ನೆನಪಿಸಿಕೊಳ್ಳುತ್ತಿದ್ದಾರೆ.

“ಈ ಸುಂದರ ಮಹಿಳೆಯನ್ನು ನೀವು ಗುರುತಿಸುತ್ತೀರಿ ಎಂದು ನನಗೆ ಗೊತ್ತು. ಆದರೆ ಈ ಫ್ರಿಡ್ಜ್‌ನ ಬ್ರ‍್ಯಾಂಡ್ ಯಾವುದೆಂದು ಗುರುತಿಸಬಲ್ಲಿರಾ ? ನೀವು ಖರೀದಿ ಮಾಡಿದ ಮೊದಲ ಫ್ರಿಡ್ಜ್ ಯಾವುದೆಂದು ನೆನಪಿಸಿಕೊಳ್ಳಬಲ್ಲಿರಾ ? ನಾವು ಅಡ್ಮಿರಲ್ ಫ್ರಿಡ್ಜ್ ಖರೀದಿಸಿದ್ದೆವು, ಅದು 35 ವರ್ಷಗಳ ಕಾಲ ಬಳಿಕೆ ಬಂತು,” ಎಂದು ನಟಿ ತರಾ ದೇಶಪಾಂಡೆ ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

’ಆ ಫ್ರಿಡ್ಜ್ ಬಹುಶಃ ಸರ್ಫ್ರಿಡ್ಜ್ ಅಥವಾ ಫೆಡ್ಡರ್ಸ್ ಲ್ಲಾಯ್ಡ್‌ ಇರಬಹುದು’ ಎಂದು ನೆಟ್ಟಿಗರು ಊಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read