ಮಹಿಳೆಯರ ಆರೋಗ್ಯಕ್ಕೆ ಉತ್ತಮ ಈ ʼವ್ಯಾಯಾಮʼ

ಸರ್ವಾಂಗಾಸನ ಇದೊಂದು ಅತ್ಯುತ್ತಮ ವ್ಯಾಯಾಮ. ಶರೀರದ ಸರ್ವಾಂಗಗಳಿಗೆ ಆರೋಗ್ಯ ನೀಡುವ ಆಸನ. ಹಾಗಾಗಿ ಇದನ್ನು ಸರ್ವಾಂಗಾಸನ ಎಂದು ಕರೆಯುತ್ತಾರೆ.

ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಮೂಳೆ ರೋಗ ಕಡಿಮೆಯಾಗುತ್ತದೆ. ಜ್ಞಾಪಕಶಕ್ತಿ ಹೆಚ್ಚಿಸುವುದರಲ್ಲಿ ನೆರವಾಗುತ್ತದೆ. ಗೂರಲು ರೋಗ ಇದ್ದರೆ ನಿವಾರಣೆಯಾಗುತ್ತದೆ. ಕೂದಲು ಉದುರುವುದನ್ನು ನಿಲ್ಲಿಸುವಲ್ಲಿ ಹೆಚ್ಚು ಸಹಕಾರಿ. ಮುಖ್ಯವಾಗಿ ಹೆರಿಗೆ ನಂತರದ ಗರ್ಭಕೋಶ ಗಾತ್ರ, ಮೊದಲಿನ ಗಾತ್ರಕ್ಕೆ ಬರುತ್ತದೆ.

ಈ ಆಸನ ಮಾಡುವ ವಿಧಾನ

ಮೊದಲು ಅಂಗಾತ ಕಾಲು ಚಾಚಿ ಮಲಗಿ, ಕೈಗಳನ್ನು ದೇಹದ ಬದಿ ಇಡಿ. ಕಾಲು ಬೆರಳುಗಳನ್ನು ಬಿಗಿಮಾಡಿ. ನಿಧಾನವಾಗಿ ಉಸಿರೆಳೆದುಕೊಳ್ಳುತ್ತ ಕಾಲುಗಳು 30 ಡಿಗ್ರಿ ಕೋನಕ್ಕೆ ಎತ್ತಿ. ಆಮೇಲೆ 60 ಡಿಗ್ರಿ ಕೋನಕ್ಕೆ ಎತ್ತಿರಿ. ನಂತರ ಅಂಗೈಗಳು ಬೆನ್ನ ಹಿಂದೆಯೇ ಆಧಾರವಾಗಿರಲಿ. ನಿಮ್ಮ ಗದ್ದ ಎದೆಯನ್ನು ತಾಕಿರಲಿ. ಇದೇ ಸ್ಥಿತಿಯಲ್ಲಿ ಎಷ್ಟು ಸಮಯ ಮಾಡಲು ಸಾಧ್ಯವೋ ಅಷ್ಟು ಹೊತ್ತು ಮಾಡಿ.

ನಿಧಾನವಾಗಿ ಉಸಿರಾಡಿ. ತದನಂತರ ಕಾಲುಗಳನ್ನು ಮಂಡಿಯ ಮೇಲೆ ಮಡಚಿಟ್ಟು ಕೊಳ್ಳಿ. ಈಗ ಕೈಗಳನ್ನು ಸೊಂಟದ ಕಡೆಗೆ ಸರಿಸಿ ದೇಹ ನಿಧಾನವಾಗಿ ಕೆಳಗಿಳಿಯುವಂತೆ ಮಾಡಿ. ನಿತಂಬ ನೆಲ ಮುಟ್ಟಿದಾಗ ಹಿಮ್ಮಡಿಗಳು ಅವನ್ನು ತಾಗಲಿ. ನಂತರ ನಿಧಾನವಾಗಿ ಕಾಲುಗಳನ್ನು ಉದ್ದ ಮಾಡಿ. ಈ ಆಸನವನ್ನು ದಿನಕ್ಕೊಮ್ಮೆ ಮಾಡಿದರೆ ಸಾಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read